ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

Gold Chain
Published on

ಮೈಸೂರು: ನಾಗನಹಳ್ಳಿ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವದ್ಧೆಯ ಚಿನ್ನದ ವಾಂಗಲ್ಯ ಸರ ಹಾಗೂ ಓಲೆಯನ್ನು ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿದ್ದಾನೆ.

ನಾಗನಹಳ್ಳಿ ನಿವಾಸಿ ವೆಂಕಟಮ್ಮ(75) 4.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡವರು.

ಶನಿವಾರ ಮೈಸೂರು-ಬೆಂಗಳೂರು ಹೆದ್ದಾರಿ ಸರ್ವೀಸ್ ರಸ್ತೆ ಪಕ್ಕದಲ್ಲಿರುವ ತಮ್ಮ ಜಮೀನಿನಲ್ಲಿ ಕೆಲಸ ವಾಡುತ್ತಿದ್ದರು.

ಆ ವೇಳೆ ಬಂದ ಅಪರಿಚಿತ ವ್ಯಕ್ತಿ ಸರ್ವೀಸ್ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ, ವೆಂಕಟಮ್ಮ ಬಳಿ ಬಂದು ಏಕಾಏಕಿ ಅವರ ಕೊರಳಿನಲ್ಲಿದ್ದ 37 ಗ್ರಾಂ ವಾಂಗಲ್ಯ ಸರ ಹಾಗೂ 10 ಗ್ರಾಂ ಕಿವಿಯೋಲೆ, ವಾಟಿಗಳನ್ನು ಕಿತ್ತುಕೊಂಡಿದ್ದಾನೆ.

ವೆಂಕಟಮ್ಮ ಕೂಗುವಷ್ಟರಲ್ಲಿ ಕಳ್ಳ ಬೈಕ್‌ನಲ್ಲಿ ಮೈಸೂರು ಕಡೆಗೆ ಪರಾರಿಯಾಗಿದ್ದಾನೆ. ಓಲೆಗಳನ್ನು ಕಿತ್ತುಕೊಂಡಿದ್ದರಿಂದ ಕಿವಿಗಳು ಹರಿದು, ಗಾಯವಾಗಿದೆ.

ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net