ಜಮೀನಿನ ವಿಚಾರದಲ್ಲಿ ಗಲಾಟೆ, ಒಬ್ಬನ ಕೊಲೆ

Published on

ಚಾಮರಾಜನಗರ: ಜಮೀನಿನ ವಿಚಾರವಾಗಿ ದಯಾದಿಗಳ ನಡುವೆ ಕಳಹ ಉಂಟಾಗಿದ್ದು, ಸೋಮವಾರ ನಡೆದ ಗಲಾಟೆಯಲ್ಲಿ ವಕ್ತಿಯೊಬ್ಬ ಕೊಲೆಯಾಗಿದ್ದಾರೆ.

ತಾಲೂಕಿನ ವಡ್ಗಲ್ ಪುರ ಗ್ರಾಮದ ನಿವಾಸಿ ಮಲ್ಲಪ್ಪ(58) ಕೊಲೆಯಾದ ವ್ಯಕ್ತಿ. ಅದೇ ಗ್ರಾಮದ ನಿವಾಸಿಯಾದ ನಾಗಪ್ಪ ಮತ್ತು ಅವರ ಮಗ ದೊರೆಸ್ವಾಮಿ, ಮಗಳು ಮೀನಾ ಹಾಗೂ ಅಳಿಯ ನಾಗರಾಜು ಅವರು ಕೊಲೆ ಮಾಡಿದವರು. ನಾಗಪ್ಪ ಮತ್ತು ಮಲ್ಲಪ್ಪ ಅವರು ದಯಾದಿಗಳಾಗಿದ್ದು, ಜಮೀನಿನ ವಿಚಾರದಲ್ಲಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿದ್ದು, ನ್ಯಾಯಾಲಯದ ಮೆಟ್ಟಿಲನ್ನು ಏರಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಇದ್ದರೂ, ಇಬ್ಬರು ಕುಟುಂಬದವರಿಗೂ ಆಗಾಗ ಗಲಾಟೆಗಳು ನಡೆಯುತ್ತಿತ್ತು.

ಮೃತ ಮಲ್ಲಪ್ಪ ಅವರ ಮಗನಾದ ಮಲ್ಲೇಶ್ ಸೋಮವಾರ ನಾಗಪ್ಪ ಅವರ ಮಗಳಾದ ಮೀನಾ ಅವರ ಜೊತೆಗೆ ಗಲಾಟೆ ಮಾಡಿದ್ದಾರೆ. ಈ ವೇಳೆ ನಾಗಪ್ಪ ಕುಟುಂಬದವರು ಮಲ್ಲಪ್ಪ ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದು, ನಾಗಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲು ಬರುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಆರೋಪಿಗಳಾದ ನಾಗಪ್ಪ, ದೊರೆಸ್ವಾಮಿ, ನಾಗರಾಜು ಹಾಗೂ ಮೀನಾ ಅವರ ಮೇಲೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net