

ಚಿಕ್ಕಮಗಳೂರು: ಸಖರಾಯಪಟ್ಟಣ ಹೋಬಳಿ ಬ್ಯಾಲದಾಳು ಗ್ರಾಮದಲ್ಲಿರುವ ತಾವು ಸಾಗುವಳಿ ಮಾಡುತ್ತಿದ್ದ ಜಮೀನಿಗೆ ಅನ್ಯ ವ್ಯಕ್ತಿಗಳು ಅತಿಕ್ರಮ ಪ್ರವೇಶ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಬಗ್ಗೆ ಜನಸಂಪರ್ಕ ಸಭೆಯಲ್ಲಿ ಅಳಲು ತೋಡಿಕೊಂಡರೂ ನನಗೆ ನ್ಯಾಯ ದೊರೆತಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸಬೇಕು ಎಂದು ಬ್ಯಾಲದಾಳು ಗ್ರಾಮದ ಮಂಜಮ್ಮ ಒತ್ತಾಯಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಲದಾಳು ಗ್ರಾಮದಲ್ಲಿ ಸುಮಾರು ೨೦ ವರ್ಷದಿಂದ ಸರ್ವೆ ನಂಬರ್ ೧೧೨ ರಲ್ಲಿ ೨.೦೭ ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತಾ ಬಂದಿದೇನೆ. ಇತ್ತೀಚೆಗೆ ನಮೂನೆ ೫೭ ರಲ್ಲಿ ಸಕ್ರಮ ಮಾಡಿಕೊಡಬೇಕು ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿz್ದೆÃವೆ ಎಂದರು.
ಅಷ್ಟರಲ್ಲಿ ನಮ್ಮೂರು ಪಕ್ಕದ ಜಿಗಣೇಹಳ್ಳಿಯ ಐವರು ನನ್ನ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿ ನನ್ನ ಜಮೀನನ್ನು ಅತಿಕ್ರಮಣ ಮಾಡಿದ್ದಾರೆ. ಅಲ್ಲದೆ ಕೊಲೆ ಬೆದರಿಕೆ ಹಾಕಿದ್ದಾರೆ. ನಮ್ಮ ಜಮೀನಿನಲ್ಲೇ ಮನೆ ನಿರ್ಮಿಸಿಕೊಂಡಿದ್ದಾರೆ ಎಂದು ದೂರಿದರು.
ಪತಿಯನ್ನು ಕಳೆದುಕೊಂಡಿರುವ ನಾನು ವಿಶೇಷಚೇತನ ಅಪ್ರಾಪ್ತ ಮಗನನ್ನು ಹೊಂದಿದ್ದು, ಜೀವನ ನಡೆಸುವುದೇ ದುಸ್ತರವಾಗಿದೆ. ಇರುವ ಅಲ್ಪಸ್ವಲ್ಪ ಭೂಮಿ ಉಳಿಸಿಕೊಳ್ಳಲು ಹಲವು ಅಧಿಕಾರಿಗಳ ಕಚೇರಿ ಅಲೆದಿz್ದÉÃನೆ. ಇತ್ತೀಚಿನ ಜನಸಂಪರ್ಕ ಸಭೆಯಲ್ಲೂ ಅರ್ಜಿ ಸಲ್ಲಿಸಿ ನನ್ನ ಕಷ್ಟ ಹೇಳಿಕೊಂಡಿz್ದÉÃನೆ. ಆದರೆ ಇದುವರೆಗೂ ನನಗೆ ನ್ಯಾಯ ದೊರಕಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಗಳು ನಾನು ನೀಡಿರುವ ನಮೂನೆ ೫೭ರ ಅರ್ಜಿಯನ್ನು ಪರಿಗಣಿಸಿ ನಾನು ಮಾಡುತ್ತಿರುವ ಸಾಗುವಳಿ ಜಮೀನನ್ನು ಸಕ್ರಮ ಮಾಡಿಕೊಡಬೇಕು. ಜಮೀನು ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜಮ್ಮ ಅವರ ತಾಯಿ ಚೊಳಚಮ್ಮ ಉಪಸ್ಥಿತರಿದ್ದರು.