

ಚಿಕ್ಕಮಗಳೂರು: ಕೆಂಪು ಬೆಲ್ಟ್ನಲ್ಲಿರುವ ಜಮೀನಿನನ್ನು ಹಳದಿ ಬೆಲ್ಟ್ಗೆ ಬದಲಾಯಿಸಬೇಕು ಎಂದು ಹಿರೇಮಗಳೂರು, ದೋಣಿಖಣ, ಚಿಕ್ಕಕುರುಬರಹಳ್ಳಿ, ದೊಡ್ಡಕುರುಬರಹಳ್ಳಿ, ದಂಟರಮಕ್ಕಿ ಗ್ರಾಮಸ್ಥರು ಮಂಗಳವಾರ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತೆ ನಾಗರತ್ನ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಗ್ರಾಮಸ್ಥ ಶ್ರೀಧರ್, ಜಮೀನು ಈ ಹಿಂದೆ ಹಸಿರು ಬೆಲ್ಟ್ನಲ್ಲಿದ್ದು ಇದೀಗ ಹೊಸದಾಗಿ ಸಿಡಿಎ ಇಲಾಖೆಯಿಂದ ಪ್ಲಾನ್ ತಯಾರಿಸಿರುವುದರಲ್ಲಿ ಮೇಲ್ಕಂಡ ಗ್ರಾಮಗಳ ಜಮೀನನ್ನು ಕೆಂಪು ಬೆಲ್ಟ್ಗೆ ಬದಲಾವಣೆ ಮಾಡಿರುವುದರಿಂದ ತೀವ್ರ ತೊಂದರೆಯಾಗಿದೆ ಎಂದರು.
ಬಹುತೇಕ ಗ್ರಾಮಗಳಲ್ಲಿ ಐದರಿಂದ ಹತ್ತು ಗುಂಟೆಗಳ ಜಮೀನುಗಳನ್ನು ಗ್ರಾಮಸ್ಥರು ಹೊಂದಿದ್ದಾರೆ. ಅಲ್ಲದೇ ಕುಟುಂಬದಲ್ಲಿ ನಾಲ್ಕೆÊದು ಮಂದಿ ಅಣ್ಣತಮ್ಮಂದಿರುವ ಕಾರಣ ಕೆಂಪು ಬೆಲ್ಟ್ಗೆ ಜಮೀನನ್ನು ನಿಗದಿಗೊಳಿಸಿದರೆ ಬಹಳಷ್ಟು ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಆ ಜಮೀನುಗಳನ್ನು ನಂಬಿಕೊAಡು ಮಕ್ಕಳ ಮದುವೆ, ವಸತಿ ನಿರ್ಮಿಸುವ ಉz್ದೆÃಶವಿದೆ. ಆದ್ದರಿಂದ ಸಿಡಿಎ ಆಯುಕ್ತರು ದಾಖಲಾತಿಗಳನ್ನು ಪರಿಶೀಲಿಸಿ ಮೇಲ್ಕಂಡ ಗ್ರಾಮಗಳನ್ನು ಕೆಂಪು ಬೆಲ್ಟ್ನಿಂದ ಹಳದಿ ಬೆಲ್ಟ್ಗೆ ಪರಿವರ್ತನೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಗ್ರಾಮಸ್ಥರಾದ ಶಶಿಕುಮಾರ್, ದಾಸೇಗೌಡ, ರಾಮಣ್ಣ, ಬಿ.ಟಿ.ಲಕ್ಷö್ಮಣ್, ರಿಯಾಜ್, ಜಯಣ್ಣ, ಕುಮಾರ್, ಪುಟ್ಟರಾಜು, ಶಿವಣ್ಣ, ಚಂದ್ರಶೇಖರ್, ಸಿz್ದÉÃಗೌಡ, ಕಾಳೇಗೌಡ ಮತ್ತಿತರರಿದ್ದರು.