ಜಮೀನನಲ್ಲಿ ಸಿಕ್ಕ ಕಾಡು ಬೆಕ್ಕಿನ ಮರಿಗಳು ಮೃಗಾಲಯಕ್ಕೆ

CTD KADU BEKKIN MARAIGALU----
Published on

ಚಿತ್ರದುರ್ಗ: ತಾಲೂಕಿನ ಮಾಡಾನಾಯಕನಹಳ್ಳಿಯ ಜಮೀನಿನಲ್ಲಿ ನಾಲ್ಕು ಕಾಡು ಬೆಕ್ಕಿನ ಮರಿಗಳು ಗುರುವಾರ ಪತ್ತೆಯಾಗಿವೆ. ಜಮೀನನ ಬೇಲಿ ಸರಿಪಡಿಸುವ ವೇಳೆ ಮರಿಗಳು ಪತ್ತೆಯಾಗಿದ್ದು, ಸುದ್ದಿ ತಿಳಿದ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸಂಜೆವರೆಗೂ ತಾಯಿ ಬೆಕ್ಕಿಗಾಗಿ ಕಾಯುತ್ತ ಕುಳಿತಿದ್ದರು. ಆದರೆ, ಅದು ಸ್ಥಳಕ್ಕೆ ಬಾರದ ಹಿನ್ನೆಲೆಯಲ್ಲಿ ಜೋಗಿಮಟ್ಟಿ ಆಡುಮಲ್ಲೇಶ್ವರ ಮೃಗಾಲಯಕ್ಕೆ ಮರಿಗಳನ್ನು ತಂದು ಸಾಕಲು ವ್ಯವಸ್ಥೆ ಮಾಡಿದ್ದಾರೆ. ಅಂದಾಜು ಒಂದು ವಾರದ ಮರಿಗಳು ಎಂದು ವಲಯ ಅರಣ್ಯಪಾಲಕ ವಸಂತಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net