

ಕಲಬುರಗಿ: ಜಿಪಂ ಮಾಜಿ ಸದಸ್ಯ ಸಂತೋಷ ಪಾಟೀಲ್ ದಣ್ಣೂರ ಜನ್ಮದಿನದ ನಿಮಿತ್ತ ಕಲಬುರಗಿಯ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಡವರಿಗೆ ಹೊದಿಕೆ, ಅನ್ನ ಸಂತರ್ಪಣೆ ಮಾಡಲಾಯಿತು. ಚನ್ನವೀರ ಪಾಟೀಲ್ ದಣ್ಣೂರ, ಭೀಮಳ್ಳಿ ಗ್ರಾಪಂ ಅಧ್ಯಕ್ಷ ವೀರಣ್ಣ ಭಂಗೂರ, ಜಾಕೀರ್ ಹುಸೇನ್ ಲಾಡಲೇಸಾಬ್, ಇಸ್ಮಾಯಿಲ್ ಸಾಬ್ ಭೀಮಳ್ಳಿ, ವೀರಭದ್ರ ಪಾಟೀಲ್, ಜಾಫರ್, ಅಸ್ಲಾಂ ಸಿಂದಗಿ ಇತರರಿದ್ದರು.