

ಬೀದರ್: ಕರೊನಾ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರು ಪ್ರಸಕ್ತ ವರ್ಷ ತಮ್ಮ ಜನ್ಮ ದಿನವನ್ನು (ಫೆ.20ಕ್ಕೆ) ಆಚರಿಸಿಕೊಳ್ಳುತ್ತಿಲ್ಲ ಎಂದು ಆಪ್ತ ಸಹಾಯಕ ವಿಜಯಕುಮಾರ ಹೂಗಾರ ತಿಳಿಸಿದ್ದಾರೆ.
ಕರೊನಾ ಪಿಡುಗು ಇರುವುದರಿಂದ ಸರ್ವರ ಆರೋಗ್ಯದ ಹಿತದೃಷ್ಟಿಯಿಂದ ಪ್ರಸಕ್ತ ವರ್ಷ ಜನ್ಮ ದಿನ ಆಚರಿಕೊಳ್ಳುತ್ತಿಲ್ಲ. ಜಿಲ್ಲೆಯ ಸಹಕಾರಿಗಳು, ಹಿತೈಷಿಗಳು, ಅಭಿಮಾನಿಗಳು, ಜನಪ್ರತಿನಿಧಿಗಳು ಜನ್ಮ ದಿನದ ನಿಮಿತ್ತ ಕಟೌಟ್, ಬ್ಯಾನರ್, ಪೋಸ್ಟರ್, ಹಾಕಬೇಡಿ ಎಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.