ಜನ್ನಾಪುರ ಗ್ರಾಮದ ರಸ್ತೆ ಕೆಸರುಮಯ

IMG-20230725-WA0198
Published on

ಆಲೂರು: ತಾಲೂಕಿನ ಪಾಳ್ಯ ಹೋಬಳಿ ಜನ್ನಾಪುರ ಗ್ರಾಮದಲ್ಲಿನ ರಸ್ತೆ ತೀರಾ ಹದಗೆಟ್ಟಿದೆ. ಮಳೆಗಾಲದಲ್ಲಿ ಕೆಸರುಮಯವಾಗುವ ಈ ರಸ್ತೆಯಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ. ನಿತ್ಯ ಸಂಚರಿಸುವ ಗ್ರಾಮಸ್ಥರ ಗೋಳು ತೀರದಾಗಿದೆ.


ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರ ಪ್ರತಿವರ್ಷ ಕೋಟ್ಯಂತರ ರೂಪಾಯಿ ಬಿಡುಗಡೆ ಮಾಡುತ್ತದೆ. ಆದರೆ ಹಣ ಎಲ್ಲಿ ಹೋಗುತ್ತದೆ. ರಸ್ತೆಗಳು ಎಲ್ಲಿ ಅಭಿವೃದ್ಧಿ ಆಗುತ್ತವೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ಸ್ಥಳೀಯರ ಆರೋಪವಾಗಿದೆ.


ಜತೆಗೆ ಗ್ರಾಮ ಪಂಚಾಯಿತಿ ಸಹ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ರಸ್ತೆಗೆ ಮಣ್ಣು ಸುರಿದು ತಕ್ಕಮಟ್ಟಿಗಿದ್ದ ರಸ್ತೆಯನ್ನು ಇನ್ನಷ್ಟು ದುಸ್ಥಿತಿಗೆ ತಳ್ಳಿದೆ. ಕೆಸರು ತುಂಬಿದ ರಸ್ತೆಯಲ್ಲಿ ತಿರುಗಾಡುವುದು ಅಸಾಧ್ಯವಾಗಿದೆ.

ಆಲೂರು ತಾಲೂಕಿನ ಕಟ್ಟಕಡೆಯ ಗ್ರಾಮ ಇದಾಗಿದ್ದು, ಸುಮಾರು 25ಕ್ಕೂ ಅಧಿಕ ಮನೆಗಳಿವೆ. ಇಲ್ಲಿನ ಜನರ ಸಂಚಾರಕ್ಕೆ ಒಂದು ಡಾಂಬರು ರಸ್ತೆಯೂ ಇಲ್ಲ. ಮಳೆನೀರು ಹರಿಯಲು ಚರಂಡಿ ವ್ಯವಸ್ಥೆಯೂ ಇಲ್ಲ. ಹೀಗಾಗಿ ನೀರು ಮಣ್ಣಿನ ರಸ್ತೆಯಲ್ಲೇ ನಿಂತು ಕೆಸರುಗದ್ದೆಯಾಗಿದೆ. ಇದರಿಂದ ನಿತ್ಯ ಹೊಲ, ಗದ್ದೆಗಳಿಗೆ ತೆರಳಲು ಜನರು ಹರಸಾಹಸ ಪಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net