ಜನಾಶೀರ್ವಾದಕ್ಕೆ ಜನರಿಂದ ಉತ್ತಮ ಬೆಂಬಲ

22 KRN-1
ಕೆ.ಆರ್.ನಗರದ ಆಂಜನೇಯ ಬಡಾವಣೆಯಲ್ಲಿ ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಸಾರ್ವಜನಿಕರಿಗೆ ಕರಪತ್ರ ನೀಡಿದರು. ಶಿವುನಾಯಕ್, ವಿನಯ್, ಎಚ್.ಎಚ್.ನಾಗೇಂದ್ರ, ಎಂ.ಜೆ.ರಮೇಶ್, ಪ್ರಸನ್ನಕುಮಾರ್, ಜಯಂತ್, ಬೀರನಹಳ್ಳಿ ಸುಧಾಕರ್, ಚೀರ‌್ನಹಳ್ಳಿ ಟಿಪ್ಪರ್‌ಪ್ರಕಾಶ್, ನಾಗರಾಜ್ ಇದ್ದರು.
Published on

ಕೆ.ಆರ್.ನಗರ: ಪಟ್ಟಣದಲ್ಲಿ ಡಿ.19ರಿಂದ ಜನಾಶೀರ್ವಾದ ಕಾರ್ಯಕ್ರಮ ಆರಂಭಗೊಂಡಿದ್ದು, ಜನರ ಬೆಂಬಲದಿಂದ ನನಗೆ ಸ್ಫೂರ್ತಿ ಹೆಚ್ಚಾಗಿದೆ ಎಂದು ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ಹೇಳಿದರು.

ಪಟ್ಟಣದ ಆಂಜನೇಯ ಬಡಾವಣೆಯಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮಲ್ಲಿ ಮಾತನಾಡಿದ ಅವರು, ಹಳ್ಳಿಗಳಲ್ಲಿ ಭತ್ತದ ಕಟಾವು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಯಾತ್ರೆಯನ್ನು ಪಟ್ಟಣಕ್ಕೆ ವರ್ಗಾಯಿಸಲಾಗಿದೆ. ಪುರಸಭೆಯ 6ನೇ ವಾರ್ಡ್‌ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಯಾತ್ರೆ ಆರಂಭಿಸಲಾಯಿತು. 7, 8, 9 ಮತ್ತು 10ನೇ ವಾರ್ಡ್‌ಗಳಲ್ಲಿ ಯಾತ್ರೆ ಪೂರ್ಣಗೊಳಿಸಲಾಗಿದ್ದು ಮುಂದಿನ 10 ದಿನಗಳೊಳಗೆ ಪಟ್ಟಣವನ್ನು ಪೂರ್ಣಗೊಳಿಸಿ ನಂತರ ಗ್ರಾಮಾಂತರಕ್ಕೆ ತೆರಳಲಾಗುತ್ತದೆ ಎಂದರು.

ಸರ್ಕಾರಿ ನೌಕರರು ಎನ್‌ಪಿಎಸ್ ಪದ್ಧತಿಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಪದ್ಧತಿ ಜಾರಿಗೆ ತರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು ಇದಕ್ಕೆ ನನ್ನ ಪೂರ್ಣ ಬೆಂಬಲವಿದೆ. ಈ ಯೋಜನೆಯನ್ನು ರದ್ದುಗೊಳಿಸಲು ರಾಜ್ಯ ಸರ್ಕಾರ ಕ್ರಮವಹಿಸಬೇಕಾಗಿದೆ. ಈ ಸಂಬಂಧ ವಿರೋಧ ಪಕ್ಷದ ನಾಯಕರಿಗೆ ಕಾಂಗ್ರೆಸ್ ವತಿಯಿಂದ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಆಂಜನೇಯ ಬಡಾವಣೆಯ ಯುವಕರು ಡಿ.ರವಿಶಂಕರ್ ದಂಪತಿಯನ್ನು ಸನ್ಮಾನಿಸಿದರು. ಪುರಸಭೆ ಪ್ರಭಾರ ಅಧ್ಯಕ್ಷೆ ಸೌಮ್ಯಾ ಲೋಕೇಶ್, ಮಾಜಿ ಅಧ್ಯಕ್ಷರಾದ ಕೆ.ಜಿ.ಸುಬ್ರಮಣ್ಯ, ಕೋಳಿಪ್ರಕಾಶ್, ನರಸಿಂಹರಾಜು, ಗೀತಾ ಮಹೇಶ್, ಸದಸ್ಯರಾದ ಶಿವುನಾಯಕ್, ಶಂಕರ್, ವಂಸತಮ್ಮ ಕೃಷ್ಣೇಗೌಡ, ಜಾವಿದ್‌ಪಾಷ, ಸಿದ್ದಿಕ್, ಮಾಜಿ ಸದಸ್ಯ ವಿನಯ್, ಎಪಿಎಂಸಿ ಮಾಜಿ ಉಪಾಧ್ಯಕ್ಷ ಎಚ್.ಎಚ್.ನಾಗೇಂದ್ರ, ಕಾಂಗ್ರೆಸ್ ನಗರಾಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ಸುನೀತಾ ರವಿಶಂಕರ್, ವೈ.ಎಸ್.ಕುಮಾರ್, ಪ್ರಸನ್ನಕುಮಾರ್, ಜಯಂತ್, ಬೀರನಹಳ್ಳಿ ಸುಧಾಕರ್, ಕೆ.ಎಲ್.ಕುಮಾರ್, ಚೀರ‌್ನಹಳ್ಳಿ ಟಿಪ್ಪರ್‌ಪ್ರಕಾಶ್, ನಾಗರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net