ಜನಾಶೀರ್ವಾದ ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಸ್ಪಂದನೆ

berya 1
ಸಾಲಿಗ್ರಾಮದ ಅಂಬೇಡ್ಕರ್ ನಗರದಲ್ಲಿ ಆಯೋಜಿಸಿದ್ದ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಡಿ.ರವಿಶಂಕರ್ ಪಾಲ್ಗೊಂಡಿದ್ದರು.
Published on

ಸಾಲಿಗ್ರಾಮ: ಬೇರೆ ಪಕ್ಷದ ಅಭ್ಯರ್ಥಿಯನ್ನು ಟೀಕೆ ಮಾಡುವುದಕ್ಕಿಂತ ಮೊದಲು ತಮ್ಮಿಂದಾಗಿರುವ ಕೆಲಸಗಳೇನು ಎಂಬುದರ ಬಗ್ಗೆ ಅರಿಯಲಿ ಎಂದು ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್ ವಿರೋಧಿಗಳಿಗೆ ತಿರುಗೇಟು ನೀಡಿದರು.

ಜನಾಶೀರ್ವಾದ ಕಾರ್ಯಕ್ರಮ ಹಿನ್ನೆಲೆಯಲ್ಲಿ ಇಲ್ಲಿನ ಅಂಬೇಡ್ಕರ್ ನಗರ ಮತ್ತು ಚೆನ್ನಯ್ಯನಕೊಪ್ಪಲು ಬಡಾವಣೆಯ ಮನೆ ಮನೆಗೆ ಭಾನುವಾರ ಭೇಟಿ ನೀಡಿ ಮಾತನಾಡಿದರು.

ಕುಕ್ಕರ್ ಹಂಚುವವರನ್ನು ನಂಬಬೇಡಿ ಎಂದು ಹೇಳುತ್ತಾರೆ. ಆದರೆ ಅವರ ಪಕ್ಷದವರೇ ಕುಕ್ಕರ್ ಹಂಚುತ್ತಿದ್ದಾಗ ಏಕೆ ಕೇಳಲಿಲ್ಲ. ಜನರ ಆಶೀರ್ವಾದ ಪಡೆಯಲು ಮತದಾರರ ಕಾಲು ಹಿಡಿದರೆ ಏನು ತಪ್ಪಿದೆ. ಅದನ್ನು ಟೀಕೆ ಮಾಡುವುದು ಏಕೆ ಎಂದು ಪ್ರಶ್ನಿಸಿದ ಅವರು, ನಿರಂತರವಾಗಿ ಮೂರು ನಾಲ್ಕು ತಿಂಗಳಿಂದ ಜನಾಶೀರ್ವಾದ ಕಾರ್ಯಕ್ರಮ ಮಾಡಲಾಗುತ್ತಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದರು.

ದಲಿತ ಮುಖಂಡ ಪುರಿ ಗೋವಿಂದ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರ ಕೈ ಬಲಪಡಿಸಲು ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತರಬೇಕು. ತಾಲೂಕಿನಲ್ಲಿ ರವಿಶಂಕರ್ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದರೂ ನಿತ್ಯ ಜನರ ಕಷ್ಟ-ಸುಖದಲ್ಲಿ ಭಾಗಿಯಾಗುತ್ತಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಂಠಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್‌ಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಗ್ರಾಪಂ ಮಾಜಿ ಸದಸ್ಯ ಬಲರಾಮ್, ತಾಪಂ ಮಾಜಿ ಸದಸ್ಯ ಚಂದು, ಮುಖಂಡರಾದ ವಸಿಂ ಪಾಷ, ಸಂತೋಷ್, ಲೋಕೇಶ್, ವಿಷ್ಣು, ಕೇಶವ, ಜಗದೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net