ಜನಸ್ಪಂದನಾ ಕಚೇರಿ ಸದ್ಬಳಕೆಯಾಗಲಿ

web2
ರಾಮದುರ್ಗ ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಅಂಗವಿಕಲರಿಗೆ ಶಾಸಕ ಅಶೋಕ ಪಟ್ಟಣ ತ್ರಿಚಕ್ರ ವಾಹನ ವಿತರಣೆ ಮಾಡಿದರು. ಶಾಂತವ್ವ ಲಮಾಣಿ, ಶೋಭಾ ಕರಗನ್ನವರ, ಶಿವರಾಜ ಹೊನ್ನಿಕೊಳ್ಳ ಇತರರಿದ್ದರು.
Published on

ರಾಮದುರ್ಗ: ಕ್ಷೇತ್ರದ ಜನತೆಯ ಅಹವಾಲುಗಳನ್ನು ಆಲಿಸುವ ಉದ್ದೇಶದಿಂದ ಜನಸ್ಪಂದನಾ ಕಚೇರಿ ಆರಂಭಿಸಲಾಗಿದೆ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಶೋಕ ಪಟ್ಟಣ ಹೇಳಿದರು.

ಪಟ್ಟಣದ ತಾಪಂ ಆವರಣದಲ್ಲಿ ನವೀಕರಣಗೊಳಿಸಲಾದ ಶಾಸಕರ ಜಸ್ಪಂದನಾ ಕಾರ್ಯಾಲಯಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿ, ಕ್ಷೇತ್ರದ ಜನತೆ ಕಾರ್ಯಾಲಯದ ಅವಧಿಯಲ್ಲಿ ಬಂದು ಅಹವಾಲು ನೀಡುವ ಮೂಲಕ ಕ್ಷೇತ್ರದ ಪ್ರಗತಿಗೆ ಸಹಕಾರ ನೀಡಬೇಕು ಎಂದರು.

ಅಂಕವಿಕಲರ ಕಲ್ಯಾಣ ಯೋಜನೆ ಅಡಿಯಲ್ಲಿ ಚೆನ್ನಾಪುರ ಶಾಂತವ್ವ ಲಮಾಣಿ, ಬಾಗೋಜಿಕೊಪ್ಪದ ಶೋಭಾ ಕರಗನ್ನವರ, ಚುಂಚನೂರ ಗ್ರಾಮದ ತಾಯವ್ವ ವಡೇಕನ್ನವರ, ಶಿವರಾಜ ಹೊನ್ನಿಕೊಳ್ಳ ಲಾನುಭವಿಗಳಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು. ಮುಖಂಡರಾದ ಪ್ರದೀಪ ಪಟ್ಟಣ, ಜಮುನಾ ಪಟ್ಟಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ.ರಂಗನಗೌಡ್ರ, ಶೇಖರ ಸಿದ್ಲಿಂಗಪ್ಪನವರ, ಪರ್ವತಗೌಡ ಪಾಟೀಲ, ಸಿದ್ಲಿಂಗಪ್ಪ ಸಿಂಗಾರಗೊಪ್ಪ, ಅನಿಕೇತ ಪಟ್ಟಣ, ಜಹೂರ ಹಾಜಿ, ಮಂಜುಳಾ ದೇವರಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net