ಜನಸ್ಪಂದನ ಕಾರ್ಯಕ್ರಮ, ಮುಂದೂಡಿಕೆ

Published on

ಗೋಕಾಕ: ನಗರದಲ್ಲಿ ಜು.5ರಂದು ನಿಗದಿಯಾಗಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಬಾರದೆ ಇರುವ ಕಾರಣ ಸಭೆ ಮುಂದೂಡಿದ ಟನೆ ನಡೆದಿದೆ. ಜಿಲ್ಲಾಧಿಕಾರಿ ಅಧ್ಯತೆಯಲ್ಲಿ ನಡೆಯಬೇಕಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅವರು ವರ್ಗಾವಣೆಗೊಂಡ ಕಾರಣ ಸಭೆಗೆ ಬರಲಿಲ್ಲ. ಹಾಗಾಗಿ, ಉಪ ವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಅಧ್ಯತೆಯಲ್ಲಿ ಸಭೆ ಪ್ರಾರಂಭಗೊಂಡ ನಂತರ ಸಾರ್ವಜನಿಕರು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಭೆಗೆ ಜಿಲ್ಲಾಧಿಕಾರಿಯೇ ಬರಬೇಕು ಎಂದು ಪಟ್ಟುಹಿಡಿದರು. ಪರಿಣಾಮ ಅಧಿಕಾರಿಗಳು ಸಭೆ ರದ್ದುಪಡಿಸಿ ಮುಂದಿನ ದಿನಾಂಕ ತಿಳಿಸುವುದಾಗಿ ಹೇಳಿ ಹೊರನಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net