ಜನಸೇವೆ ವೈದ್ಯರ ಗುರಿಯಾಗಲಿ

Haridas
Published on

ಕಲಬುರಗಿ: ವೈದ್ಯಕೀಯ ರಂಗದ ಗಮನಾರ್ಹ ಬದಲಾವಣೆ ಸಂದರ್ಭದಲ್ಲಿ ವೈದ್ಯರ ಜವಾಬ್ದಾರಿ ಹೆಚ್ಚಾಗಿದೆ. ವೈದ್ಯ ಜನಮುಖಿಯಾಗಿ ಕರ್ತವ್ಯ ನಿರ್ವಹಿಸುವ ಗುಣದಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಶಾಸಕಿ ಕನೀಜ್ ಫಾತಿಮಾ ಅಭಿಪ್ರಾಯಪಟ್ಟರು.
ಹಾಗರಗಾ ಕ್ರಾಸ್ ಬಳಿ ಹರಿದಾಸ ಹೃದಯ ಆಸ್ಪತ್ರೆಯನ್ನು ಸೋಮವಾರ ಉದ್ಘಾಟಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಬಾಲಕರು ಮತ್ತು ಯುವಕರಲ್ಲೂ ಹೃದಯದ ತೊಂದರೆ ಕಾಣಿಸುತ್ತಿದೆ. ಕಲಬುರಗಿಯಂತಹ ಕ್ಷಿಪ್ರ ಬೆಳೆಯುತ್ತಿರುವ ನಗರಕ್ಕೆ ಇಂತಹ ಆಸ್ಪತ್ರೆಗಳ ಅಗತ್ಯ ಹೆಚ್ಚಾಗಿದ್ದು, ವೈದ್ಯರು ಜನಸೇವೆ ಮಾಡಲು ಉತ್ತಮ ಅವಕಾಶವಿದೆ ಎಂದು ಹೇಳಿ ಶುಭ ಹಾರೈಸಿದರು.
ಖ್ಯಾತ ಉದ್ಯಮಿ ರಾಘವೇಂದ್ರ ಮೈಲಾಪುರ ಮಾತನಾಡಿ, ಡಾ.ಅರುಣಕುಮಾರ ಹರಿದಾಸ ಅವರಂತಹ ತಜ್ಞ ವೈದ್ಯರು ನಗರದಲ್ಲಿ ಲಭ್ಯವಿರುವುದು ರೋಗಿಗಳ ಪಾಲಿಗೆ ಆಶಾಕಿರಣವಿದ್ದಂತೆ ಎಂದರು.
ಹರಿದಾಸ ಆಸ್ಪತ್ರೆ ನಿರ್ದೇಶಕ ಡಾ.ಅರುಣಕುಮಾರ ಹರಿದಾಸ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಹೃದಯ ಸಂಬAಧಿ ಕಾಯಿಲೆಗಳಿಗೆ ಎಲ್ಲ ತರಹದ ಚಿಕಿತ್ಸೆ ನೀಡುವ ಅತ್ಯಾಧುನಿಕ ಪರೀಕ್ಷೆ, ಶಸ್ತçಚಿಕಿತ್ಸೆ ವಿಭಾಗ ಹಾಗೂ ಪರಿಣತ ವೈದ್ಯರ ತಂಡದೊAದಿಗೆ ಆಸ್ಪತ್ರೆ ಜನಸೇವೆಗೆ ಸಜ್ಜಾಗಿದೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಯುವ ಮುಖಂಡ ಫರಾಜುಲ್​ ಇಸ್ಲಾಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net