ಜನಸಾಮಾನ್ಯರಿಂದ ಈ ಕೆಲಸ ಸಾಧ್ಯವಿಲ್ಲ

SEP 23-HRP-01
Published on

ಹರಪನಹಳ್ಳಿ: ಪೌರ ಕಾರ್ಮಿಕರು ಸೈನಿಕರಿದ್ದಂತೆ ಜೀವ ಲೆಕ್ಕಿಸದೆ ಕೆಲಸ ಮಾಡುತ್ತಾರೆ ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಸ್ವಾತಂತ್ರೃ ನಂತರ ಕಾನೂನು ತಿದ್ದುಪಡಿಗೂ ಮುನ್ನ ಪೌರ ಕಾರ್ಮಿಕರನ್ನು ಅಸ್ಪಶ್ಯರಂತೆ ಕಾಣಲಾಗುತ್ತಿತ್ತು. ಪೌರ ಕಾರ್ಮಿಕರು ಮಾಡುವ ಕೆಲಸವನ್ನು ಜನಸಾಮಾನ್ಯರು ಮಾಡಲು ಸಾಧ್ಯವಿಲ್ಲ ಎಂದರು.

ಪುರಸಭೆ ಮುಖ್ಯಾಧಿಕಾರಿ ರೇಣುಕಾ ಎಸ್.ದೇಸಾಯಿ ಮಾತನಾಡಿ. ಸಾರ್ವಜನಿಕರ ಸುರಕ್ಷತೆಗಾಗಿ ನಿತ್ಯ ಪೌರ ಕಾರ್ಮಿಕರು ಮಾಡುವ ಕೆಲಸ ಅಮೋಘವಾಗಿದ್ದು. ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ನೀಡಿ ಅವರ ಕುಟುಂಬ ರಕ್ಷಣೆ ಮಾಡುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭೆ ಪರಿಸರ ಇಂಜಿನಿಯರ್ ಅಮರೇಶ್, ವ್ಯವಸ್ಥಾಪಕ ಮಂಜುನಾಥ, ಚಿದಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net