ಜನಸಾಮಾನ್ಯರ ಪಾಲಿನ ಆಶಾಕಿರಣ

A ray of hope for the common people
A ray of hope for the common people
Published on

ಬಾದಾಮಿ: ಪಂಚ ಗ್ಯಾರಂಟಿ ಯೋಜನೆಗಳು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾಗಿದ್ದು, ಜನ ಸಾಮಾನ್ಯರ ಪಾಲಿನ ಆಶಾಕಿರಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಬಾದಾಮಿ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ ಮಾಗುಂಡಪ್ಪ ಬೂದಿಹಾಳ ಹೇಳಿದರು.

ತಾಪಂ ಸಭಾಭವನದಲ್ಲಿ ಜರುಗಿದ ಪಂಚ ಗ್ಯಾರಂಟಿ ಯೋಜನೆಯ 8ನೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜನಸಾಮಾನ್ಯರ ಶ್ರೇಯೋಭಿವೃದ್ಧಿಗೋಸ್ಕರ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನ ಭಾಗ್ಯ, ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ, ಯುವ ನಿಧಿ ಜಾರಿಗೆ ತಂದಿದ್ದು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಯೋಜನೆಯ ಲಾಭ ತಲುಪಬೇಕು ಎಂದರು.

ಎಲ್ಲ ಅರ್ಹ ಲಾನುಭವಿಗಳಿಗೆ ಯೋಜನೆ ತಲುಪಬೇಕು. ಯೋಜನೆಯಿಂದ ಅರ್ಹ ಲಾನುಭವಿಗಳು ಹೊರಗುಳಿಯಬಾರದು. ಈ ಕುರಿತು ಅಧಿಕಾರಿಗಳು ಶ್ರಮ ವಹಿಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸೂಚಿಸಿದರು.

ಯೋಜನೆ ಕುರಿತು ವ್ಯಾಪಕವಾಗಿ ಪ್ರಚಾರ ಮಾಡಬೇಕು. ಸಣ್ಣ ತಾಂತ್ರಿಕ ಸಮಸ್ಯೆಗಳಿಂದ ಹಲವು ಅರ್ಹ ಲಾನುಭವಿಗಳು ಯೋಜನೆಗಳಿಂದ ಹೊರಗುಳಿದಿದ್ದು, ಇವುಗಳನ್ನು ತುರ್ತಾಗಿ ಸರಿಪಡಿಸಬೇಕು. ಅರ್ಹ ಲಾನುಭವಿಗಳು ಕುಂದು ಕೊರತೆ ಇದ್ದಲ್ಲಿ ತಾಪಂ ಕಾರ್ಯಾಲಯ ದಲ್ಲಿರುವ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಗೆ ಭೇಟಿ ನೀಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸಿ.ಎಂ. ಯಾವಗಲ್ಲ, ಎಸ್.ಬಿ. ಜಾಬನ್ನವರ, ಜಿ.ಟಿ. ಅಂಕಲಗಿ, ಬಿ.ವೈ. ಶೆಟ್ಟೆಪ್ಪನವರ, ಎಸ್.ಎನ್. ಮದಿ, ಎಸ್‌ಎಸ್. ವಾಚಮೇಕರ, ಎಂ.ಎಲ್. ಪಮ್ಮಾರ್, ಎಸ್.ವೈ. ಗಾಜಿ, ಎಸ್.ಆರ್. ಪಾಟೀಲ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net