ಜನವಸತಿ ಪ್ರದೇಶದಲ್ಲಿ ಕೇರ್ ಸೆಂಟರ್ ಬೇಡ

27SIRSI1
Published on

ಶಿರಸಿ: ಜನವಸತಿ ಪ್ರದೇಶವಾದ ಬಾಪೂಜಿನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬಾರದು ಎಂದು ಒತ್ತಾಯಿಸಿ ಬಾಪೂಜಿ ನಗರ ಹಿತರಕ್ಷಣಾ ಸಮಿತಿ ಹಾಗೂ ಬಾಪೂಜಿ ನಗರ ಯುವಕ ಮಂಡಳದ ವತಿಯಿಂದ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿದ ಸಂಘಟನೆಗಳ ಪ್ರಮುಖರು, ಕರೊನಾ ಸೋಂಕು ಸಾಂಕ್ರಾಮಿಕವಾಗಿ ಹರಡುವ ಭೀತಿಯಿಂದ ಆತಂಕಗೊಂಡಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಆರಂಭಿಸಿದರೆ ಮಕ್ಕಳು ಮತ್ತು ವಯೋವೃದ್ಧರಿಗೆ ತೊಂದರೆಯಾಗುತ್ತದೆ. ಹೀಗಾಗಿ ಊರ ಹೊರಗೆ ಕೇರ್ ಸೆಂಟರ್ ಅನ್ನು ತೆರೆಯಬೇಕು. ಈ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಬಾಪೂಜಿನಗರ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಜೇಶ ದೇಶಭಾಗ, ಯುವಕ ಮಂಡಳದ ಅದ್ಯಕ್ಷ ಜೆ.ಆರ್. ಸಂತೋಷಕುಮಾರ, ಪರಶುರಾಮ ಜೋಗಳೆಕರ್, ತುಕಾರಾಮ ನೇತ್ರಕರ್, ಸಂತೋಷ ನೇತ್ರಕರ್, ಚಂದ್ರಕಾಂತ ಮಡಗಾಂವಕರ್, ರಾಜೇಶ ಮಡಗಾಂವಕರ್, ಆನಂದ ಹುಬ್ಬಳ್ಳಿ, ರತನ ಬೋರ್ಕರ್, ಬಾಳಾ ಚಂದಾವರ್, ಜಯಂತಿ ಸಿರ್ಸಿಕರ್, ಚಂದನ್ ಸಿರ್ಸಿಕರ್, ಸಂತೋಷ ಬೋರ್ಕರ್, ನಾಗರಾಜ ಜೋಗಳೆಕರ್, ಪರಶುರಾಮ ಜೋಗಳೆಕರ್, ಸುಜಯ ಜೋಗಳೆಕರ್, ಗಣಪತಿ ಶಿರಾಲಿ, ದಿನೇಶ ಜೋಗಳೆಕರ್, ರಾಘು ಸ್ವಾದಿ, ಕೆರಿಯಾ ಸ್ವಾದಿ, ನವೀನ ನೇತ್ರಕರ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net