

ಶಹಾಪುರ: ನಗರದ ರಾಯಲ್ ಫಂಕ್ಷನ್ ಹಾಲ್‌ನಲ್ಲಿ ೫ರಂದು ಮಧ್ಯಾಹ್ನ ೨ಕ್ಕೆ `ಜನರೊಂದಿಗೆ ಜನತಾದಳ ' ಮತ್ತು ಜೆಡಿಎಸ್ ಸದಸ್ಯತ್ವ ಅಭಿಯಾನಕ್ಕೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದ್ದಾರೆ.
ಬುಧವಾರ ಪಕ್ಷದ ಕಚೇರಿಯಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕರ‍್ಯಕ್ರಮಕ್ಕೂ ಮುನ್ನ ನಗರದ ಚರಬಸವೇಶ್ವರ ಕಮಾನ್‌ನಿಂದ ಫಂಕ್ಷನ್ ಹಾಲ್‌ವರೆಗೂ ಬೈಕ್ ರ‍್ಯಾಲಿ ನಡೆಯಲಿದೆ ಎಂದರು.
ಜೆಡಿಎಸ್‌ನ ರಾಷ್ಟಿçÃಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಅವರ ಸೂಚನೆ ಮೇರೆಗೆ ನಿಖಿಲ್ ಕುಮಾರಸ್ವಾಮಿ, ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಸುಮಾರು ೧೧೦ ಕ್ಷೇತ್ರಗಳಿಗೆ ಪ್ರವಾಸ ಆರಂಭಿಸಿದ್ದು, ಪಕ್ಷದ ಸದಸ್ಯತ್ವವನ್ನು ಮೊಬೈಲ್ ಸಂಖ್ಯೆಗೆ ಮಿಸ್ ಕಾಲ ನೀಡುವ ಮೂಲಕ ಸದಸ್ಯತ್ವ ಪಡೆಯಬಹುದಾಗಿದೆ ಎಂದು ಅವರು ಹೇಳಿದರು.
ಪಕ್ಷದ ಕಾರ್ಯಚಟುವಟಿಕೆ ಕುರಿತು ಜನರೊಂದಿಗೆ ಜನತಾದಳ ಎಂಬ ವಿನೂತ ಶೀರ್ಷಿಕೆಯೊಂದಿಗೆ ಜನಪರ ಕಾಳಜಿಯ ಕಾರ್ಯಕ್ರಮ ನಡೆಯಲಿದ್ದು, ಜನರು ನಾಡಿನ, ಕ್ಷೇತ್ರದ ಸಮಸ್ಯೆಗಳನ್ನು ಅವರೊಂದಿಗೆ ಹಂಚಿಕೊಳ್ಳಬಹುದು. ಹೀಗಾಗಿ ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಮತ್ತು ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.
ಈ ವೇಳೆ ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಪಕ್ಷದ ಮುಖಂಡರಾದ ಮಲ್ಲಣ್ಣ ಮಡ್ಡಿ ಸಾಹು, ವಿಠಲ್ ವಗ್ಗಿ, ಶಿವಕುಮಾರ ಮೋಟಗಿ, ರಾಮಚಂದ್ರ ಕಾಶಿರಾಜ, ಲಾಲನಸಾಬ ಖುರೇಶಿ, ಶ್ರೀಕಾಂತ ಸುಬೇದಾರ, ವಕೀಲ ವಾಸುದೇವ ಕಟ್ಟಿಮನಿ, ನಗರಸಭೆ ಸದಸ್ಯರಾದ ಸತೀಶ ಪಂಚಭಾವಿ, ಅಪ್ಪಣ್ಣ ದಶವಂತ ಮತ್ತು ಅಶೋಕ ನಾಯಕ ಇತರರಿದ್ದರು.