ಜನರೊಂದಿಗೆ ಕೋತಿ ಆತ್ಮೀಯತೆ ಪ್ರದರ್ಶನ

20 KAMPLI 04
Published on

ಕಂಪ್ಲಿ: ಬಳ್ಳಾಪುರ ಗ್ರಾಮದಲ್ಲಿ ದೊಡ್ಡ ಕರಿಕೋತಿಯೊಂದು ಕಳೆದ ಒಂದು ವಾರದಿಂದ ಗ್ರಾಮಸ್ಥರೊಂದಿಗೆ ಆತ್ಮೀಯತೆ ಪ್ರದರ್ಶಿಸುತ್ತಿದೆ.

ಕಳೆದ ಒಂದು ವಾರದ ಹಿಂದೆ ಗ್ರಾಮಕ್ಕೆ ಬಂದಿರುವ ಕೋತಿ ಗ್ರಾಮದಲ್ಲಿನ ಕಟ್ಟೆ ಮೇಲೆ ಕುಳಿತುಕೊಳ್ಳುವ ಜನರ ಬಳಿಗೆ ತೆರಳಿ ಅವರ ಪಕ್ಕ ಕುಳಿತುಕೊಳ್ಳುತ್ತಿದೆ. ಜನರ ಮೇಲೆ ಕೈ ಹಾಕಿ ಕುಳಿತು ಸಂಭ್ರಮಿಸುತ್ತಿದೆ. ಕೆಲವರು ಕೋತಿ ಹಣೆಗೆ ಕುಂಕುಮವಿಟ್ಟು ಪೂಜೆ ಸಲ್ಲಿಸಿದ್ದಾರೆ. ಇದುವರೆಗೆ ಯಾವುದೇ ಹಾನಿ ಮಾಡದ ಹಿನ್ನೆಲೆಯಲ್ಲಿ ಜನರು ಕೂಡ ಕೋತಿಯೊಂದಿಗೆ ಆತ್ಮೀಯತೆ ಪ್ರದರ್ಶಿಸುತ್ತಿದ್ದಾರೆ.

ಕಳೆದ ಜುಲೈನಲ್ಲಿ ಕರಿಕೋತಿಯೊಂದು ಸಮೀಪದ ಚಿಕ್ಕಜಾಯಿಗನೂರು ಗ್ರಾಮದಲ್ಲಿ ಜನರ ಮೈಮೇಲೆ ಕುಳಿತುಕೊಳ್ಳುತ್ತಿತ್ತು. ಕೋತಿಯನ್ನು ಕಂಡು ಭಯದಿಂದ ಓಡಿಸಿದರೆ ಕಚ್ಚಿ ಗಾಯಗೊಳಿಸುತ್ತಿತ್ತು. ಗ್ರಾಮದ ನಾಲ್ವರನ್ನು ಕೋತಿ ಕಚ್ಚಿ ಗಾಯಗೊಳಿಸಿತ್ತು. ಇದು ಅದೇ ಕೋತಿ ಇರಬಹುದು ಎಂದು ಗ್ರಾಮಸ್ಥ ಮೌನೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net