ಜನರು ಕೆರೆ ನೀರು ಸ್ವಚ್ಛವಾಗಿಟ್ಟುಕೊಳ್ಳಲಿ

4
Published on

ಶಿರಸಂಗಿ: ಗ್ರಾಮೀಣ ಕೆರೆಗಳ ಪುನಶ್ಚೇತನ, ಶುದ್ಧ ಗಂಗಾ ಕುಡಿಯುವ ನೀರು ಪೂರೈಸುವ ಯೋಜನೆ ಸಾರ್ವಜನಿಕರಿಗೆ ತುಂಬ ಉಪಯುಕ್ತವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕಿ ದಯಾಶೀಲ ಹೇಳಿದರು.

ಸಮೀಪದ ಆಚಮಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಮ್ಮೂರ ನಮ್ಮ ಕೆರೆ ಯೋಜನೆಯಡಿ ಪುನಶ್ಚೇತನಗೊಂಡ ಕೆರೆ ಲೋಕಾರ್ಪಣೆ ಹಾಗೂ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೆರೆ ನೀರು ಕಾಪಾಡಿಕೊಂಡು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದರು.


ಗ್ರಾಮದ ಕೆರೆ ಅಭಿವೃದ್ಧಿ ಗೌರವ ಅಧ್ಯ ಅಣ್ಣಪ್ಪಗೌಡ ಪಾಟೀಲ, ತಹಸೀಲ್ದಾರ್​ ಮಲ್ಲಿಕಾರ್ಜುನ ಹೆಗ್ಗನ್ನವರ, ತಾಪಂ ಇಒ ಯಶವಂತ ಕುಮಾರ, ಯೋಜನೆ ಜಿಲ್ಲಾ ನಿರ್ದೇಶಕ ಎಚ್​.ಆರ್​. ಲವಕುಮಾರ, ತಾಪಂ ನರೇಗಾ ನಿರ್ದೇಶಕ ರಮೇಶ ರಕ್ಕಸಗಿ, ಕಗದಾಳ ಗ್ರಾಪಂ ಅಧ್ಯ ಕಷ್ಣರಡ್ಡಿ ಸವದತ್ತಿ, ಕಗದಾಳ ಪಿಡಿಒ ಪಿ.ಎನ್​. ಕೌಜಲಗಿ, ಕೆರೆ ಅಭಿಯಂತ ಲಿಂಗರಾಜ ಮಾಳವಾಡ, ಯೋಜನಾಧಿಕಾರಿ ಸುಬ್ರಾಯ ನಾಯ್ಕ್​, ಆಚಮಟ್ಟಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯ ಮಲ್ಲಿಕಾರ್ಜುನ ಮೇಲಿನಮನಿ, ಎಸ್​ಡಿಎಂಸಿ ಅಧ್ಯ ಲಕ್ಷ$್ಮಣ ಮಲ್ಲಾಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net