ಜನರಿಗೆ ಸ್ಪಂದಿಸುವವರನ್ನು ಆಯ್ಕೆ ಮಾಡಿ

20KWR3
Published on

ಕಾರವಾರ: ಜನರಿಗೆ ಸ್ಪಂದನೆ ನೀಡುವವರನ್ನು ಆಯ್ಕೆ ಮಾಡಬೇಕು ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ಅಂಕೋಲಾ ತಾಲೂಕಿನ ಬೆಂಳಂಬರ, ಬಾವಿಕೇರಿ, ಅಲಗೇರಿ, ಅಚವೆ, ಡೋಂಗ್ರಿ, ಸುಂಕಸಾಳ, ಕಾರವಾರದ ಕಡವಾಡ ಗ್ರಾಪಂ ವ್ಯಾಪ್ತಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿದರು.

ಚುನಾವಣೆ ಎಂಬುದು ಕೇವಲ ನಾಯಕರಿಗೆ ಸೀಮಿತವಾಗಿಲ್ಲ. ಕಾರ್ಯಕರ್ತರು ಪಾಲ್ಗೊಳ್ಳಬಹುದು. ಅವರಲ್ಲಿರುವ ನಾಯಕತ್ವ ಗುಣವನ್ನು ಜನಸೇವೆ ಮಾಡುವ ಮೂಲಕ ಪ್ರಸ್ತುತಪಡಿಸಬೇಕಿದೆ. ಗಾಂಧೀಜಿ ಅವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡಲು ಗ್ರಾಪಂ ಚುನಾವಣೆ ಅವಶ್ಯವಾಗಿದೆ. ಪಂಚಾಯಿತಿ ಎಂದರೆ ದೇವಾಲಯವಿದ್ದಂತೆ. ಆ ದೇವಾಲಯದಲ್ಲಿ ಉತ್ತಮ ಆಡಳಿತ ನೀಡುವವರು, ಜನಸೇವೆ ಮಾಡುವರನ್ನು, ಗ್ರಾಮೀಣ ಅಭಿವೃದ್ಧಿಗೆ ಸಹಕಾರ ನೀಡುವ ಸದಸ್ಯರನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ ಗುನಗಿ, ಜಿಲ್ಲಾ ಉಪಾಧ್ಯಕ್ಷ ನಾಗರಾಜ ನಾಯಕ,ರಾಜ್ಯ ಮೀನುಗಾರ ಪ್ರಕೋಷ್ಟಕದ ಗಣಪತಿ ಉಳ್ವೇಕರ್, ಅಂಕೋಲಾ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಗೋಪಾಲಕೃಷ್ಣ ವೈದ್ಯ, ಕಾರವಾರ ಮಂಡಲದ ಅಧ್ಯಕ್ಷರಾದ ನಾಗೇಶ ಕುರ್ಡೆಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net