ಜನರಿಗೆ ಬಿಜೆಪಿ ತತ್ವ-ಸಿದ್ಧಾಂತ ತಿಳಿಸಿ

28.ktal.01
Published on

ಕವಿತಾಳ: ಹಾಲಾಪುರದಲ್ಲಿ ಬೂತ್ ಮಟ್ಟದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು.

ಬಿಜೆಪಿ ತತ್ವ-ಸಿದ್ಧಾಂತ ಆಧಾರಿತ ಪಕ್ಷವಾಗಿದ್ದು, ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯತ್ವ ಹೊಂದಿದೆ. ಮಸ್ಕಿ ಕ್ಷೇತ್ರದಲ್ಲಿ 40 ಸಾವಿರ ಸದಸ್ಯತ್ವ ಗುರಿ ಹೊಂದಲಾಗಿದೆ. ಬಿಜೆಪಿ ಕಾರ್ಯಕರ್ತರು ಪ್ರತಿ ಗ್ರಾಮದಲ್ಲಿ ಸದಸ್ಯತ್ವ ಅಭಿಯಾನ ನಡೆಸಬೇಕು. ಪ್ರತಿಯೊಬ್ಬರಿಗೆ ಬಿಜೆಪಿಯ ತತ್ವ ಸಿದ್ಧಾಂತ ತಿಳಿಸಬೇಕು ಎಂದರು.

ಪ್ರಮುಖರಾದ ಮಲ್ಲಣ್ಣ ರೇವಣಕಿ, ಈರನಗೌಡ ದಳಪತಿ, ಪರಯ್ಯಸ್ವಾಮಿ, ವೀರನಗೌಡ ಮಾ.ಪಾ., ಅಮರಪ್ಪಗೌಡ, ಚನ್ನಬಸವ ಪಾಟೀಲ, ಶೇಖರಯ್ಯಸ್ವಾಮಿ, ಜಮದಗ್ನಿ ನಾಯಕ, ವಿರೂಪಾಕ್ಷ ಎಚ್.ಕೆ., ಯಂಕಪ್ಪ ನಾಯಕ, ಸಿದ್ದಾರ್ಥ ಪಾಟೀಲ್, ಅಮರೇಶ ನಾಯಕ ಕೊಟೆಕಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net