ಜನರಿಗೆ ಉತ್ತಮ ಸೌಕರ್ಯ ಬದಗಿಸಿದೆ ಕೇಂದ್ರ ಸರ್ಕಾರ

14ark1
Published on

ಅರಕಲಗೂಡು: ಕೋವಿಡ್-19 ಸಂಕಷ್ಟದ ಯಶಸ್ವಿ ನಿರ್ವಹಣೆ ಜತೆಗೆ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಧಾರಗಳನ್ನು ಕೈಗೊಂಡು ಜನರಿಗೆ ಉತ್ತಮ ಸೌಕರ್ಯಗಳನ್ನು ಒದಗಿಸಿದೆ ಎಂದು ಮಾಜಿ ಸಚಿವ ಎ.ಮಂಜು ಹರ್ಷ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬಿಜೆಪಿ ಮುಖಂಡರೊಂದಿಗೆ ಅಂಗಡಿ ಹಾಗೂ ಮನೆ ಮನೆಗೆ ತೆರಳಿ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳ ಕರಪತ್ರ ವಿತರಿಸಿ ಮಾತನಾಡಿ, ಆರ್ಟಿಕಲ್ 370 ರದ್ದು, ಪೌರತ್ವ ತಿದ್ದುಪಡಿ ವಿಧೇಯಕ, ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆ, ಸೇರಿ ಹಲವಾರು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡು ದೇಶದ ಜನರ ಹಿತಕಾಪಾಡಿದೆ ಎಂದು ತಿಳಿಸಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಮುತ್ತಿಗೆ ರಮೇಶ್, ಹೆತ್ತಗೌಡನಹಳ್ಳಿ ಶ್ರೀನಿವಾಸ್, ಬಾಣದಹಳ್ಳಿ ಗಣೇಶ್, ರಘು, ಜಬಿವುಲ್ಲಾ, ರವಿಕುಮಾರ್, ಉದೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net