ಜನರಲ್ಲಿ ರಾಷ್ಟç ಭಕ್ತಿ ಮೂಡಿಸಿದ ಸಂಗೀತ ಸಂಜೆ

05
Published on

ಕಲಬುರಗಿ : ಲೋಹಾರಗಲ್ಲಿಯಲ್ಲಿ ಸ್ವಾತಂತ್ರೊÈÃತ್ಸವ ನಿಮಿತ್ತ ಮಂಗಳವಾರ ಸಂಜೆ ಸ್ವರಾಂಜಲಿ ಮೆಲೋಡಿಸ್, ಸಂಗೀತ ಆರಾಧಕರ ಬಳಗದಿಂದ ವೀರ ಯೋಧರಿಗೆ ಸನ್ಮಾನ, ಸಂಗೀತ ಕಾರ್ಯಕ್ರಮದಲ್ಲಿ ದೇಶ ಭಕ್ತಿ ಮೂಡಿಸುವ ಗಾಯನ ಕೇಳುಗರ ಮೈಮನ ರೋಮಾಂಚನಗೊಳಿಸಿತು.

ಯೋಧ ಶಾಂತಯ್ಯ ಸಂಧಿಮಠ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ದೇಶ ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ದೇಶಕ್ಕಾಗಿ ಹೋರಾಡುವ ವೀರ ಯೋಧರನ್ನು ಗೌರವಿಸಿ, ನೈತಿಕ ಬೆಂಬಲ ತುಂಬಬೇಕು. ರಾಷ್ಟçದ ಕಾರ್ಯಕ್ಕೆ ಕೈ ಜೋಡಿಸಬೇಕು. ಯೋಧರು ನಿತ್ಯ ಹಲವು ಸಂಕಷ್ಟ, ಸವಾಲುಗಳ ಮಧ್ಯೆ ದೇಶ ರಕ್ಷಣೆ ಮಾಡುತ್ತಾರೆ. ಅವರ ಕುಟುಂಬದವರ ಜತೆಗೆ ನಾವು ನಿಲ್ಲಬೇಕು ಎಂದು ಹೇಳಿದರು.
ಎಎಸ್‌ಐ ಗಣಪತ ಚವ್ಹಾಣ್ ಮಾತನಾಡಿದರು. ಸ್ವರಾಂಜಲಿ ಮೆಲೋಡಿಸ್‌ನ ಸಿದ್ದರಾಮ ಹಂಚನಾಳ, ಸುಜಾತಾ ಸ್ವಾಮಿ ಜವಳಗಿ, ರವೀಂದ್ರ ಕುಲಕರ್ಣಿ ಅವರು ದೇಶಭಕ್ತಿಗೀತೆಗಳನ್ನು ಹಾಡಿದರು.

ಯೋಧ ಸುಭಾಷ ಕಿರಣಗಿ, ಪ್ರಮುಖರಾದ ರೇವಣಸಿದ್ದಪ್ಪ ಖಂಡೇರಾವ, ಅಸ್ತಿಮಲ್ ಸಾಹೇಬ, ರಾಜಶೇಖರ ಬಂಗರಗಿ, ಶಿವಕುಮಾರ ಬಿರಾದಾರ, ಶರಣು ಹಡಲಗಿ, ಶ್ರೀನಾಥ ಮೇತ್ರಿ, ರಾಜು ಆರ್.ಜಿ., ಸಿದ್ದು ಹೂಗಾರ, ಮಂಜುನಾಥ ಕಲಬುರಗಿ, ಮನೋಜ ಅಂಟದ, ಪ್ರಭು ಪಾಟೀಲ್, ಜವಾಹರ ಮಾಮಾ, ದೊಡ್ಡಪ್ಪ ಪೂಜಾರಿ, ಸುನೀಲ ಹಿರೇಮಣಿ, ಮಹೇಶ ಗೋಕುಲ, ನವೀನ್ ಆಲೇಗಾಂವ್, ಅಂಬಾರಾಯ ಪಾಟೀಲ್, ಬಸವರಾಜ ಸುಲ್ತಾನಪುರ, ಭೀಮು ಸಂಗೋಳಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net