

ಚಿತ್ರದುರ್ಗ:ಜನರಲ್ಲಿ ದೇಶಭಕ್ತಿ ಭಾವನೆ ಪ್ರೇರೇಪಿಸಿ, ಏಕತೆ ಮತ್ತು ರಾಷ್ಟ್ರೀಯತೆ ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಬೈಕ್‌ರ‌್ಯಾಲಿ ನಿಜಕ್ಕೂ ಉತ್ತಮ ಕಾರ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ನಗರದ ಕನಕವೃತ್ತದಲ್ಲಿ ಮಂಗಳವಾರ ಜಿಲ್ಲಾಡಳಿತ, ನಗರಸಭೆಯಿಂದ 78ನೇ ಸ್ವಾತಂತ್ರೊೃೀತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹರ್‌ಘರ್ ತಿರಂಗಾ ಬೈಕ್ ರ‌್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಪ್ರತಿ ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವಂತೆ ಜನರನ್ನು ಜಾಗೃತಗೊಳಿಸಬೇಕು ಎಂದು ತಿಳಿಸಿದರು.
ಪೌರಾಯುಕ್ತೆ ಎಂ.ರೇಣುಕಾ ಮಾತನಾಡಿ, ಹರ್‌ಘರ್ ತಿರಂಗಾ ಅಭಿಯಾನ ಅನುಷ್ಠಾನಕ್ಕಾಗಿ ಬೈಕ್‌ರ‌್ಯಾಲಿ, ದೇಶಭಕ್ತಿ ಗೀತೆಗಳ ಗಾಯನ ಸೇರಿ ವಿವಿಧ ರೀತಿಯ ಕಾರ‌್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆ.15ರವರೆಗೆ ಪ್ರತಿಯೊಬ್ಬರು ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕೆಂದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅಂಚೆ ಕಚೇರಿ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರಧ್ವಜ ಲಭ್ಯವಿದೆ. ಪ್ರತಿ ಧ್ವಜಕ್ಕೆ 26 ರೂ. ದರ ನಿಗಧಿಪಡಿಸಲಾಗಿದೆ ಎಂದರು.
ಕನಕವೃತ್ತದಿಂದ ಆರಂಭವಾದ ರ‌್ಯಾಲಿ ಸಂಗೊಳ್ಳಿರಾಯಣ್ಣ, ಗಾಂಧಿ, ಎಸ್‌ಬಿಐ ವೃತ್ತ, ಪ್ರವಾಸಿ ಮಂದಿರ ಮಾರ್ಗ, ಅಂಬೇಡ್ಕರ್ ಹಾಗೂ ಮದಕರಿ ನಾಯಕ ವೃತ್ತಗಳ ಮೂಲಕ ಚಳ್ಳಕೆರೆ ಗೇಟ್ ತಲುಪಿ ನಂತರ ನಗರಸಭೆ ಆವರಣವನ್ನು ತಲುಪಿ ಮುಕ್ತಾಯವಾಯಿತು.
ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಸುಚೇತಾ ನೆಲವಿಗಿ, ನಗರಸಭೆ ಸದಸ್ಯರಾದ ಸುರೇಶ್, ಶಶಿಧರ್, ವ್ಯವಸ್ಥಾಪಕಿ ಮಂಜುಳಾ,ನೌಕರರ ಸಂಘದ ಅಧ್ಯಕ್ಷೆ ರೇಣುಕಮ್ಮ, ಗುತ್ತಿಗೆದಾರ ಸಂಘದ ಅಧ್ಯಕ್ಷ ಸಿದ್ದಪ್ಪ ಇತರರಿದ್ದರು. (ಸಿಟಿಡಿ 13 ಬೈಕ್ ರ‌್ಯಾಲಿ)
ಹರ್‌ಘರ್ ತಿರಂಗಾ ಅಭಿಯಾನದಡಿ ಚಿತ್ರದುರ್ಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಬೈಕ್‌ರ‌್ಯಾಲಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಚಾಲನೆ ನೀಡಿದರು. ನಗರಸಭೆ ಆಯುಕ್ತೆ ಎಂ.ರೇಣುಕಾ, ಸದಸ್ಯರಾದ ಶಶಿಧರ್, ಸುರೇಶ್ ಇತರರಿದ್ದರು.