

ಆಳಂದ: ಸಾವಿರಾರು ರ‍್ಷದಿಂದ ಉಳಿಸಿ ಬೆಳೆದು ಬಂದಿರುವ ಜಾನಪದವೂ ಜನರ ಬಾಯಿಯಲ್ಲಿ ಸದಾ ಜೀವಂತವಾಗಿದೆ ಎಂದು ಷಣ್ಮುಖಯ್ಯ ಸ್ವಾಮಿ ಹೇಳಿದರು.
ನಗರದ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸುಂಟನೂರದ ಶ್ರೀ ಶಾಂತಲಿಂಗೇಶ್ವರ ವೀರಗಾಸೆ ಪುರವಂತಿಕೆ ಜಾನಪದ ಕಲಾ ಸಂದಿಂದ ಹಮ್ಮಿಕೊಂಡ ಸಂಗೀತ ವೈಭವ ಸಾಂಸತಿಕ ಕರ‍್ಯಕ್ರಮದಲ್ಲಿ ಮಾತನಾಡಿದರು.
ಚನಬಸಯ್ಯ ಶಾಸ್ತ್ರಿ -ಖಣದಾಳ ಕಥಾಕರ‍್ತನೆ ನಡೆಸಿದರು. ಶಿವಶರಣಯ್ಯ ಮಠ ಜಾನಪದ ಗೀತೆ- ಹಾಡಿದರು. ವೆಂಕಟೇಶ ತೇಲಿ ವಚನ ಗಾನ ಲಹರಿ ಹರಿಸಿದರು. ಅಶೋಕ ಆಳಂದ ತತ್ವಪದ- ಹಾಡಿದರು. ಭೂಮಿಕಾ ಪಾಟೀಲ್, ಈರಮ್ಮ ಎಂ.ಚೆಟ್ಟಿ, ಮುತ್ತುರಾಜ ಪೂಜಾರಿ ಸಂಗೀತಕ್ಕೆ ವಿಜಯಕುಮಾರ ತೇಲಿ, ಸುರೇಶ ಆಳಂದ ತಬಲಾ ಸಾಥ್ ನೀಡಿದರು.
ಶ್ರೀಶೈಲ್ ಪಾಟೀಲ್-ಭುಸನೂರ ಅಧ್ಯಕ್ಷತೆ ವಹಿಸಿದ್ದರು. ಸರ‍್ಯಕಾಂತ ಕೋರೆ ಉದ್ಘಾಟಿಸಿದರು. ಅತಿಥಿಗಳಾಗಿ ಗುರುಬಸಯ್ಯ ಸ್ವಾಮಿ, ಮಲ್ಲಿಕರ‍್ಜುನ ಕಂಟೆಪ್ಪಗೋಳ, ಮಹಾಲಿಂಗಯ್ಯ ಸ್ವಾಮಿ, ದಿಲೀಪ ಬಡಿಗೇರ ಇತರರಿದ್ದರು.