

ಚಿತ್ರದುರ್ಗ: ಜಿಲ್ಲಾಸ್ಪತ್ರೆ ಜನರಲ್ ಸರ್ಜನ್ ಡಾ.ಸಾಲಿಮಂಜಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆಯುಕ್ತರು ಆ ದೇಶಿಸಿದ್ದಾರೆ. ರೋಗಿಯೊಬ್ಬರಿಂದ ಅವರ ಆಪರೇಷನ್‌ಗೆ 5 ಸಾವಿರ ರೂ.ಲಂಚಕ್ಕೆ ಡಿಮ್ಯಾಂಡ್ ಮಾಡಿದ್ದಾರೆಂಬ ಆರೋಪ ವೈದ್ಯರ ವಿ ರುದ್ಧ ಕೇಳಿ ಬಂದಿತ್ತು ಹಾಗೂ ಈ ವೈದ್ಯರ ಲಂಚಾವತಾರದ ವಿಡಿಯೋ ವೈರಲ್ ಆಗಿತ್ತು.
ವೈದ್ಯರ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆಯಕ್ತ ಡಿ.ರಂ ದೀಪ್ ಅವರು ಆದೇಶಿಸಿದ್ದಾರೆ. ಜು.6ರಂದು ರೋಗಿ ಶಸ್ತ್ರ ಚಿಕಿತ್ಸೆಗಾಗಿ,ಹಣಕ್ಕೆ ಬೇಡಿಕೆ ಇಟ್ಟು,ಆತನ ಸಂಬಂಧಿಕರಿಂದ 4 ಸಾವಿರ ರೂ. ಲಂಚ ಸ್ವೀಕರಿಸಿದ ಹಾಗೂ ಅಪ ರೇಷನ್ ಮಾಡಿಸಿಕೊಳ್ಳೋ ದರ್ದು ಇರುತ್ತೆ ಎಂಬಿತ್ಯಾದಿ ದರ್ಪದ ಮಾತುಗಳನ್ನಾಡಿದ ಆರೋಪ ಕೇಳಿ ಬಂದಿದ್ದು,ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ಮಂಜಪ್ಪ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.
(ಪೋಟೊಗೆ ಪ್ರಯತ್ನಿಸಲಾಗಿದೆ)