

ಯಾದಗಿರಿ: ರಾಜ್ಯದೆಲ್ಲಡೆ ಇವತ್ತು ಬಿಜೆಪಿ ಪರವಾದ ಅಲೆ ಇದ್ದು, ಬರುವ ಚುನಾವಣೆಯಲ್ಲಿ ಮತ್ತೊಮ್ಮೆ ನಮ್ಮ ಪಕ್ಷ ಅಕಾರಕ್ಕೆ ಬರುವುದು ನಿಶ್ಚಿತ ಎಂದು ಪಕ್ಷದ ರಾಷ್ಟ್ರೀಯ ಯುವ ಮೋಚರ್ಾ ಅದ್ಯಕ್ಷ ತೇಜಸ್ವಿ ಸೂರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ನಗರದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಯುವ ಮೋಚರ್ಾ ಸಮಾವೇಶ ಉದ್ಘಾಟಿಸಿ ಮಾತನಾಡಿ, ಚುನಾವಣೆ ಇರಲಿ, ಬಿಡಲಿ ವರ್ಷದ 375 ದಿನ ಹಗಲಿರುಳು ರಾಜ್ಯದ ಜನರ ಹಿತ ಕಾಪಾಡುವಲ್ಲಿ ನಮ್ಮ ಯುವ ಮೋಚರ್ಾ ಕಾರ್ಯಕರ್ತರು ಸದಾ ಮುಂಚೂಣಿಯಲ್ಲಿರುತ್ತಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ನಂತೆ ಕೇವಲ ಚುನಾವಣೆ ಸಂದರ್ಭದಲ್ಲಿ ಗಿಮಿಕ್ ಮಾಡುವವರು ನಾವಲ್ಲ ಎಂದರು.
ದೇಶದಲ್ಲಿ ಒಂದು ಕಾಲಕ್ಕೆ ಬಿಹಾರ ರಾಜ್ಯ ಅಭಿವೃದ್ಧಿ ವಿಷಯದಲ್ಲಿ ತೀರಾ ಹಿಂದುಳಿಯುವ ಮೂಲಕ ಸುದ್ದಿಯಲ್ಲಿತ್ತು. ಅಲ್ಲಿನ ಜನರನ್ನು ಆಳುವ ಜನಪ್ರತಿನಿಗಳು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದರು. ಬಹುಶಃ ಅಲ್ಲಿಗೂ ಕಲ್ಯಾಣ ಕನರ್ಾಟಕ ಭಾಗಕ್ಕೂ ಯಾವ ವ್ಯತ್ಯಾಸವಿಲ್ಲ. ಸತತ 40 ವರ್ಷಗಳ ಕಾಲ ಅಕಾರ ನಡೆಸಿದವರು ಅಭಿವೃದ್ಧಿಯನ್ನು ಸಂಪೂರ್ಣವಾಗಿ ಮರೆತು ಜನರನ್ನು ಕತ್ತಲೆಯಟ್ಟಿದ್ದರು. ಆದರೆ ಯಡಿಯೂರಪ್ಪ ಮುಖ್ಯಮಂತ್ರಿಯಾದ ತಕ್ಷಣ ಯಾದಗಿರಿ ಜಿಲ್ಲೆಯನ್ನಾಗಿ ಘೋಷಿಸಿದರು. ಜಿಲ್ಲೆಗೆ ಸಕರ್ಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿದರು ಎಂದು ಹೇಳಿದರು.
ರಾಜ್ಯದಲ್ಲಿ 300 ಕಿ.ಮೀಟರ್ ಒಂದರಂತೆ ವಿಮಾನ ನಿಲ್ದಾಣಗಳು ನಿಮರ್ಾಣಗೊಂಡಿವೆ. 70 ವರ್ಷಗಳಲ್ಲಿ ಕಾಂಗ್ರೆಸ್ ದೇಶದಲ್ಲಿ 70 ವಿಮಾನ ನಿಲ್ದಾಣ ನಿಮರ್ಾಣ ಮಾಡಿದರೆ, 7 ವರ್ಷದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 70 ನಿಲ್ದಾಣ ನಿಮರ್ಿಸಿದ್ದಾರೆ. ಬಿಜೆಪಿ ಸಕರ್ಾರ ಯಾವುದೇ ಒಳ್ಳೆ ಯೋಜನೆ ಜಾರಿಗೊಳಿಸಿದರೂ ಕಾಂಗ್ರೆಸ್ ನವರು ನಾವೇ ಮಾಡಿದ್ದೇವೆ ಎನ್ನುತ್ತಾರೆ. ಅಪ್ಪಿತಪ್ಪಿ ಸಣ್ಣ ಪ್ರಮಾದ ನಡೆದರೂ ಅದು ಬಿಜೆಪಿಯವರು ಮಾಡಿದ್ದಾರೆ. ಪಕ್ಷದಲ್ಲಿ ನಾನಾ ಹುದ್ದೆ ಪಡೆದು, ಅಕಾರ ಅನುಭವಿಸಿ ಇದೀಗ ಕಾಂಗ್ರೆಸ್ನ ಬಾಗಿಲು ತಟ್ಟಿದವರಿಂದ ಬಿಜೆಪಿಗೆ ನಯಾಪೈಸೆ ನಷ್ಟವಾಗುವುದಿಲ್ಲ ಎಂದು ಹೆಸರು ಹೇಳದೆ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ಗೆ ಟಾಂಗ್ ನೀಡಿದರು.
ಶಾಸಕ ವೆಂಕಟರಡ್ಡಿ ಮುದ್ನಾಳ್ ಮಾತನಾಡಿ, ದೇಶದ ಭವಿಷ್ಯ ಯುವಶಕ್ತಿಯ ಕೈಯಲ್ಲಿದೆ. ಯುವ ಜನತೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಪಕ್ಷದ ಜಿಲ್ಲಾ ಪ್ರಭಾರಿ ಅಮರನಾಥ ಪಾಟೀಲ್, ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವೀರಬಸವಂತರಡ್ಡಿ ಮುದ್ನಾಳ್, ಪ್ರಮುಖರಾದ ಮಹೇಶರಡ್ಡಿ ಮುದ್ನಾಳ್, ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಡಾ.ಚಂದ್ರಶೇಖರ ಸುಬೇದಾರ್, ನಾಗರತ್ನ ಕುಪ್ಪಿ, ನಗರಸಭೆ ಅದ್ಯಕ್ಷ ಸುರೇಶ ಅಂಬಿಗೇರ, ಚಂದ್ರಶೇಖರಗೌಡ ಮಾಗನೂರ, ಯುವ ಮೋಚರ್ಾ ಜಿಲ್ಲಾದ್ಯಕ್ಷ ಮೌನೇಶ ಬೆಳಗೇರಾ ಇದ್ದರು.