ಜನರನ್ನು ಆಕರ್ಷಿಸಿದ ಶ್ವಾನಗಳ ಪ್ರದರ್ಶನ

bkt-11-3 (4)
Published on

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾನಗಿರಿಯಲ್ಲಿ ಹಮ್ಮಿಕೊಂಡ ತೋಟಗಾರಿಕೆ ಮೇಳದಲ್ಲಿ ಪಶು ಸಂಗೋಪನ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ವಿವಿಧ ತಳಿಗಳ ಶ್ವಾನಗಳ ಪ್ರದರ್ಶನವು ಮೇಳಕ್ಕೆ ಆಗಮಿಸಿದ ಜನರನ್ನು ಆಕರ್ಷಿಸುವಂತೆ ಮಾಡಿತು.

ಜಿಲ್ಲೆಯ ಹೆಸರಾಂತ ಹಾಗೂ ಪ್ರಸಿದ್ದಿ ಪಡೆದ ಮುಧೋಳ ಹಂಡ್ಸ್, ಬೀಗಲ್, ರಾಟ್ ವೀಲರ್, ಡಾಲ್ಮೇಶಿಯನ್, ಬೆಲ್ಜಿಯನ್ ಶೆಫರ್ಡ, ಬಾಕ್ಸರ್, ಪಂಚಾಬಿ ಗ್ರೇ ಹೌಂಡ್, ಡ್ಯಾಷ್ಪಂಡ್, ಸೈಬೇರಿಯನ್ ಹಸ್ಕಿ, ಪೊಮೊರೇನಿಯನ್, ಗ್ರೇಟ್ ಡೇನ್, ಲ್ಯಾಬ್ರಡಾರ್ ರಿಟ್ರೆöÊವರ್, ಶಿಹ್‌ತ್ಸು, ಲಾಸಾ ಅಪ್ಸೋ, ಪಗ್ ಡಾಗ್, ಡಾಬರ್‌ಮನ್, ಜರ್ಮನ್ ಶಪರ್ಡ, ಗೋಲ್ಡನ್ ರೇಟ್ರಿವರ್ ಸೇರಿದಂತೆ ಒಟ್ಟು ೧೭ ಜಾತಿಯ ಶ್ವಾನಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಪಶು ಇಲಾಖೆಯ ಉಪನಿರ್ದೇಶಕ ಎಸ್.ಎಚ್.ಕರಡಿಗುಡ್ಡ, ಮುಖ್ಯ ಪಶು ವೈದ್ಯಾಧಿಕಾರಿ ಆರ್.ಎಸ್.ಪದರಾ, ಹಿರಿಯ ಪಶು ವೈದ್ಯ ಪರಿವೀಕ್ಷಕ ಐ.ಎಸ್.ಜಿಗಜಿನ್ನಿ, ಸೇರಿದಂತೆ ಪಶು ವೈದ್ಯರು ಮುತುವರ್ಜಿ ವಹಿಸಿ, ಸಾರ್ವಜನಿಕರಿಗೆ ಶ್ವಾನಗಳ ಪಾಲನೆ ಪೋಷನೆ ಬಗ್ಗೆ ಮಾಹಿತಿ ನೀಡಿತ್ತಿದ್ದರು.
ಕೃಷಿಕರಿಗಾಗಿ ವಿಶೇಷ ವಿನ್ಯಾಸದ ಕೃಷಿ ಪರಿಕರಗಳು ರೈತರನ್ನು ಆಕರ್ಷಿಸಿದವು. ಪವರ್ ಸ್ಪೆöÊ ಯಂತ್ರ, ಡಸ್ಟ್ ಸ್ಪೆöÊ, ಮಿನಿ ಟ್ಯಾಕ್ಟರ, ವಿವಿಧ ಜಾತಿಯ ಸಸಿಗಳು ತೆಂಗು, ಮಾವು ಚಿಕ್ಕು ಸೇರಿದಂತೆ ಇತರೆ ಜಾತಿಯ ಸಸಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net