ಜನರ ಸೇವೆಗಾಗಿ ರಾಜಕೀಯ ಪ್ರವೇಶ

28BANNU1
Published on

ಬನ್ನೂರು: ವೈದ್ಯರಾಗಿ ತಾವು ಮಾಡಿದ ಕೆಲಸ ಜನರ ಪ್ರೀತಿಯಿಂದ ತೃಪ್ತಿಯನ್ನುಂಟು ಮಾಡಿದೆ. ಇದೀಗ ಮತ್ತಷ್ಟು ಜನರ ಸೇವೆಯನ್ನು ಮಾಡುವ ಉದ್ದೇಶದೊಂದಿಗೆ ರಾಜಕೀಯ ಪ್ರವೇಶಿಸಿದ್ದು, ತಮ್ಮನ್ನು ಜನರು ವಿಜಯಶಾಲಿಯನ್ನಾಗಿ ಮಾಡುವ ವಿಶ್ವಾಸ ಇದೆ ಎಂದು ಬಿಜೆಪಿ ಅಭ್ಯರ್ಥಿ ಡಾ.ರೇವಣ್ಣ ತಿಳಿಸಿದರು.

ಪಟ್ಟಣದ ಸಮೀಪದ ಬಿ.ಸೀಹಳ್ಳಿ ಗ್ರಾಮದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮತಯಾಚನೆ ಸಂದರ್ಭ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದ್ದಾರೆ. ಅವರ ಪಕ್ಷದಲ್ಲಿ ನಾವು ಕಾರ್ಯನಿರ್ವಹಿಸುವುದು ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ(ಮೂಲಸಂಘಟನೆ) ಜಿಲ್ಲಾಧ್ಯಕ್ಷ ನಾರಾಯಣ್, ವಿನೋದ್, ಗಿರೀಶ್, ಎಂ.ಕೃಷ್ಣಪ್ಪ, ಸತೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹದೇವಯ್ಯ, ಮಣಿಕಂಠ, ಎಸ್.ಕೆ. ರಾಜೂಗೌಡ ಸೇರಿದಂತೆ ಬಿ.ಸೀಹಳ್ಳಿಯ ಗ್ರಾಮಸ್ಥರು ಮುಖಂಡರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net