ಜನರ ಸಮಸ್ಯೆಗಳಿಗೆ ಸ್ಪಂದಿಸಿದ ತೃಪ್ತಿ ಇದೆ

7-44
ಜುಗೂಳ ಗ್ರಾಮದಲ್ಲಿ ಶಾಸಕ ಶ್ರೀಮಂತ ಪಾಟೀಲ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಅಣ್ಣಾಸಾಬ ಪಾಟೀಲ, ಅನಿಲ ಕಡೋಲೆ, ಕಾಕಾಸಾಬ ಪಾಟೀಲ, ಸುಧಾಕರ ಗಣೇಶವಾಡಿ ಇತರರು ಇದ್ದರು.
Published on

ಕಾಗವಾಡ: ಮತಕ್ಷೇತ್ರದ ಗ್ರಾಮೀಣ ಭಾಗದ ಮುಖ್ಯ ಮೂಲಸಮಸ್ಯೆಗಳಿಗೆ ಸ್ಪಂದಿಸಿದ ತೃಪ್ತಿಯಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು. ಜುಗೂಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ 4 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಹಲವು ಗ್ರಾಮಸ್ಥರ ರಸ್ತೆ ಬೇಡಿಕೆ ಈಡೇರಿಸಿರುವ ತೃಪ್ತಿಯಿದೆ. ಜನರ ಕಷ್ಟಗಳಿಗೆ ಸೇವೆ ಸಲ್ಲಿಸಲು ಸದಾ ಸಿದ್ಧನಿದ್ದೇನೆ ಎಂದರು. ಗ್ರಾಮಸ್ಥ ಅಣ್ಣಾಸಾಬ ಪಾಟೀಲ ಮಾತನಾಡಿ, ಹಳ್ಳಿಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಶಾಸಕರು ಪ್ರಯತ್ನಿಸಿದ್ದಾರೆ. ರಸ್ತೆ, ನೀರು ಇತರ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದರು. ಶಾಸಕರನ್ನು ಮುಸ್ಲಿಂ ಸಮುದಾಯದವರು ಸನ್ಮಾನಿಸಿದರು. ಮುಖಂಡರಾದ ಅಣ್ಣಾಸಾಬ ಪಾಟೀಲ, ಅನಿಲ ಕಡೋಲೆ, ಸುಧಾಕರ ಗಣೇಶವಾಡಿ, ಅರುಣ ಗಣೇಶವಾಡಿ, ಬಾಬಾಸಾಬ ಪಾಟೀಲ, ವಿಜಯ ಅಗಸರ, ಕಾಕಾಸಾಬ ಪಾಟೀಲ, ಸುರೇಶ ಢಂಗ, ಉದಯ ದೇಸಾಯಿ, ನಿತಿನ ಪಾಟೀಲ, ಅವಿನಾಶ ಪಾಟೀಲ, ರಾವಸಾಬ ಅಕ್ಕೋಳೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net