ಜನರ ಸಮಸ್ಯೆ ಆಲಿಸಿದ ಶಾಸಕ

3 hbd 01
Published on

ಹುಮನಾಬಾದ್: ಪಟ್ಟಣದ ವಾಂಜರಿ ಮತ್ತು ಟೀಚರ್ ಬಡಾವಣೆಗಳಿಗೆ ಮಂಗಳವಾರ ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್ ಭೇಟಿ ನೀಡಿ, ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು, ಬೀದಿ ದೀಪ ವ್ಯವಸ್ಥೆ ಮಾಡಬೇಕು. ಹದಗೆಟ್ಟ ರಸ್ತೆ ಶೀಘ್ರದಲ್ಲಿ ದುರಸ್ತಿ ಮಾಡಿಸಬೇಕು. ಅಗತ್ಯವಿದ್ದಲ್ಲಿ ನೂತನ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ಥಳೀಯ ನಿವಾಸಿಗಳ ಜತೆ ಬೀದಿ ಬೀದಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿದರು. ಅಂಗವಿಕಲ ವೇತನ, ವಿಧವಾ ವೇತನ, ಚರಂಡಿ ಸಮಸ್ಯೆ ಸೇರಿ ವಿವಿಧ ಸಮಸ್ಯೆಗಳನ್ನು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದರು.

ಪುರಸಭೆ ಸದಸ್ಯ ಭೀಮುಬಾಯಿ ಹಳದೊಡ್ಡಿ, ಪುರಸಭೆ ಮುಖ್ಯಾಧಿಕಾರಿ ಶಿವಕುಮಾರ, ಮುಖಂಡರಾದ ಲೋಕೇಶ ರೆಡ್ಡಿ ಹಳದೊಡ್ಡಿ, ರಾಜರೆಡ್ಡಿ ಹಳದೊಡ್ಡಿ, ಸಂಜು ರೆಡ್ಡಿ, ರಾಜರೆಡ್ಡಿ ಮುಡಬಿ, ಮಹೇಶ ಸ್ವಾಮಿ ಕಲ್ಲೂರ, ಸಂತೋಷ ರೆಡ್ಡಿ ಗದ್ದಲ, ಸುರೇಶ ರೆಡ್ಡಿ, ಸಂತೋಷ ಭೋಲಾ, ಗಿರೀಶ ಪಾಟೀಲ್, ಮಲ್ಲಿಕಾರ್ಜುನ ಸೀಗಿ, ನಾಗಭೂಷಣ ಸಂಗಮ, ರಾಜಕುಮಾರ ಭಂಡಾರಿ, ಜ್ಞಾನದೇವ ಧೂಮಾಳೆ, ಸಂಜು ವಾಡೇಕರ್, ಸುನೀಲ ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net