

ಗೋಕಾಕ: ಶೌರ್ಯ ಸ್ವಯಂ ಸೇವಕರು ತಾವು ಪಡೆದ ತರಬೇತಿಯಿಂದ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸೇವಾ ಮನೋಭಾವದಿಂದ ಜನರ ಸಂಕಷ್ಟಗಳಿಗೆ ಸ್ವಂದಿಸಬೇಕು ಎಂದು ತಹಸೀಲ್ದಾರ್ ಡಾ. ಮೋಹನ ಭಸ್ಮೆ ಹೇಳಿದರು.
ನಗರದ ಜ್ಞಾನ ಮಂದಿರ ಸಭಾಂಗಣದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಟಕಗಳ ಸ್ವಯಂ ಸೇವಕರ ತರಬೇತಿ ಶಿಬಿರ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಹಾನಿಯಿಂದ ಪ್ರಕೃತಿ ವಿಕೋಪಗಳು ಉಂಟಾಗುತ್ತವೆ. ಇಂತಹ ಸಂದರ್ಭದಲ್ಲಿ ಜನರಿಗೆ ಧೈರ್ಯ ತುಂಬಿ ಸ್ವಯಂ ಸೇವಕರು ಅವರ ಕಷ್ಟದಲ್ಲಿ ಭಾಗಿಯಾಗಬೇಕು. ವಿರೇಂದ್ರ ಹೆಗಡೆ ಅವರ ಆಶಯದಂತೆ ಜನರ ರಣೆ ಮಾಡಬೇಕು ಎಂದು ಕರೆ ನೀಡಿದರು.
ಶೌರ್ಯ ಮತ್ತು ವಿಪತ್ತು ನಿರ್ವಾಹಣ ಟಕದ ಯೋಜನಾಧಿಕಾರಿ ಜಯವಂತ ಪಟಗಾರ ಮಾತನಾಡಿ, ರಣಾ ಪಡೆಗಳು ಹಾಗೂ ಜನರ ನಡುವೆ ವಿಪತ್ತಿನ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಲು ಯುವಕರಿಗೆ ತರಬೇತಿ ನೀಡಿ ಶೌರ್ಯ ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು, ವಿಪತ್ತು ಸಂದರ್ಭದಲ್ಲಿ ರಾಜಾದ್ಯಂತ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು. ಮಂಗಳೂರಿನ ಉಷಾ ಫೈಯರ್ ಶೆಟ್ಟಿ ಕಂಪನಿಯ ತರಬೇತುದಾರ ಸಂತೋಷ ಪಿಟರ್ ಡಿಸೋಜಾ, ಗೋಕಾಕ ಅಗ್ನಿ ಶಾಮಕದಳದ ಸದಾನಂದ ಮೆಳವಂಕಿ, ಜಿಲ್ಲಾ ಜನಜಾಗೃತಿ ವೇದಿಕೆಯ ಮೋಹನ ಪೇಥೆ, ಜ್ಞಾನ ಮಂದಿರದ ಸುರ್ವಣಾ ಹೋಸಮಠ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎಚ್.ಆರ್. ಲವಕುಮಾರ, ೇತ್ರ ಯೋಜನಾಧಿಕಾರಿ ಹರೀಶ್, ತಿಮ್ಮೇಶಿ ಎಂ.ಸಿ. ಇದ್ದರು.