

ಯಾದಗಿರಿ: ಪ್ರಸ್ತುತ ರಾಜಕೀಯಕ್ಕೆ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಬರುವ ಅವಶ್ಯಕತೆ ಇದ್ದು, ನಾಯಕರಾದವರು ನೊಂದವರಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಸಲಹೆ ನೀಡಿದರು.
ನಗರದ ತಾಪಂ ಕಚೇರಿಯ ಸಾಮಥ್ರ್ಯ ಸೌಧದಲ್ಲಿ ಗುರುಮಠಕಲ್ ಶಾಸಕರ ನವೀಕೃತಗೊಂಡ ನೂತನ ಜನಸಂಪರ್ಕ ಕಚೇರಿ ಲೋಕಾರ್ಪಣೆಗೊಳಿಸಿ ಮಾತನಾಡಿ, ಸಕರ್ಾರ ಯಾವುದೇ ಇರಲಿ, ಜನಕಲ್ಯಾಣಕ್ಕಾಗಿ ಜಾರಿಯಾದ ಯೋಜನೆಗಳನ್ನು ಮತದಾರರಿಗೆ ತಲುಪಿಸುವ ಕೆಲಸವಾಗಬೇಕು. ಶಾಸಕರಾದವರು, ಸದಾ ಜನರ ಮಧ್ಯೆ ಇದ್ದು ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಶಾಸಕ ಶರಣಗೌಡ ಕಂದಕೂರ ಮಾತನಾಡಿ, ಈ ಹಿಂದೆ ನಮ್ಮ ತಂದೆಯವರು ಗುರುಮಠಕಲ್ ಹಾಗೂ ಯಾದಗಿರಿಯಲ್ಲಿ ಕಚೇರಿ ಆರಂಭಿಸಿ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಒದಗಿಸಿಕೊಡುತ್ತಿದ್ದರು. ಅವರ ಮಾರ್ಗದರ್ಶನದಂತೆ ನಾನೂ ಸಹ ಮುಂದುವರೆಯುವೆ ಎಂದರು.