

ಕಲಬುರಗಿ: ನಾನಾ ಕಾರಣಗಳಿಗಾಗಿ ಅನ್ಯ ರಾಜ್ಯಗಳಿಗೆ ತೆರಳಿರುವ ಕಲಬುರಗಿ ಸೇರಿ ಕಲ್ಯಾಣ ಕನರ್ಾಟಕದ ಜನತೆ ತಮ್ಮ ತಮ್ಮ ಸ್ಥಳಗಳಿಗೆ ಮರಳುವಾಗ ಗಡಿ ಪ್ರದೇಶಗಳಲ್ಲಿ ತಡೆಯಲಾಗುತ್ತಿದೆ. ಅಂಥವರು ಕೂಡಲೇ ತಮ್ಮ ತಮ್ಮ ಸ್ಥಳಗಳಿಗೆ ಸೇರುವಂತೆ ಮಾಡಬೇಕೆಂದು ಸಂಸದ ಡಾ.ಉಮೇಶ ಜಾಧವ್ ರಾಜ್ಯ ಸಕರ್ಾರದ ಮುಖ್ಯ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದಾರೆ.
ದುಡಿಯಲು ಎಂದು ಜಿಲ್ಲೆಯ ಸುಮಾರು ಒಂದು ಲಕ್ಷ ಜನ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಸೇರಿ ನಾನಾ ರಾಜ್ಯಗಳಿಗೆ ತೆರಳಿದ್ದಾರೆ. ಆದರೆ ಕರೊನಾ ಕಾಣಿಸಿಕೊಂಡ ನಂತರ ಹೆದರಿರುವ ಅವರು ಮರಳಿ ತಮ್ಮೂರುಗಳಿಗೆ ಬರಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರನ್ನು ಗಡಿ ಪ್ರದೇಶಗಳಲ್ಲಿ ಕೂಡಿ ಹಾಕಲಾಗಿದೆ. ಇತ್ತ ಕಲಬುರಗಿಗೆ ಬರಲು ಬಿಡುತ್ತಿಲ್ಲ. ಹೀಗಾಗಿ ಅವರು ಸಾಕಷ್ಟು ಕಷ್ಟ ಎದುರಿಸುತ್ತಿದ್ದರಿಂದ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಅವರ ಊರುಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದ್ದಾರೆ.
ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿ , ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಜನತೆ ಬರುವುದು ಮತ್ತು ಬಿಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುತ್ತದೆ. ಆದ್ದರಿಂದ ಕೇಂದ್ರದ ಮೊರೆ ಹೋಗುವಂತೆ ಸಂಸದರಿಗೆ ಸಲಹೆ ನೀಡಿದ್ದಾರೆ.
ಈ ಮಧ್ಯೆ ಗಡಿ ಜಿಲ್ಲೆ ಸೊಲ್ಲಾಪುರದಲ್ಲಿರುವ ಜಿಲ್ಲೆ ಜನರಿಗೆ ಎಲ್ಲ ಅನುಕೂಲ ಮಾಡಿಕೊಡುವಂತೆ ವಿಜಯಪುರ ಜಿಲ್ಲಾಧಿಕಾರಿಗೆ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದು, ವಿಜಯಪುರ ಜಿಲ್ಲಾಧಿಕಾರಿ ಸೊಲ್ಲಾಪುರ ಜಿಲ್ಲಾ ಕಲೆಕ್ಟರ್ ಜತೆ ಮಾತನಾಡಿ ಕಲಬುರಗಿ ಜಿಲ್ಲೆ ಜನರ ಸಮಸ್ಯೆಯನ್ನು ಗಮನಕ್ಕೆ ತಂದಿದ್ದು, ತಕ್ಷಣ ಎಲ್ಲ ವ್ಯವಸ್ಥೆ ಮಾಡುವಂತೆ ಕೋರಿದ್ದಾರೆ.
ಅನ್ಯ ರಾಜ್ಯಗಳ ಜನತೆಯ ಸಂಕಷ್ಟವನ್ನು ಖುದ್ದಾಗಿ ತಿಳಿದುಕೊಳ್ಳುತ್ತಿರುವ ಸಂಸದ ಡಾ.ಜಾಧವ್, ಸತತವಾಗಿ ಸಂಬಂಧಿತ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದಾರೆ. ಶುಕ್ರವಾರ ಇಡೀ ದಿನ ತಮ್ಮ ಕಚೇರಿಯಲ್ಲಿ (ಸಂಸದರ ಕಚೇರಿ) ಕುಳಿತು ಎಲ್ಲ ವಿಷಯಗಳನ್ನು ಅರಿತ್ತಿದ್ದಲ್ಲದೆ ಜಿಲ್ಲೆ ಜನರ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವುದು ಕಂಡಿತು. ಜಿಲ್ಲೆಯ ಒಟ್ಟಾರೆ ಕರೊನಾ ಸ್ಥಿತಿಗತಿಗೆ ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿ ಬಿ.ಶರತ್ ಜತೆ ಚರ್ಚಿಸಿದರು.
ಸಮಸ್ಯೆಗೆ ಸಿಲುಕಿದ್ದರೆ ಇವರನ್ನು ಸಂಪರ್ಕಿಸಿ
ಗಡಿ ಭಾಗದಲ್ಲಿ ಜಿಲ್ಲೆಯವರು ಸಮಸ್ಯೆಗೆ ಸಿಲುಕಿದ್ದರೆ ಸಂಸದರ ಕಚೇರಿ (08472-279999), ರಮೇಶ ಆರ್. ಧುತ್ತರಗಿ (97399 76311), ಪ್ರಲ್ಹಾದ ರಾಠೋಡ್ (95354 69103), ರೋಶನ್ ರಾಠೋಡ್ (96110 06601) ಮತ್ತು ದಸ್ತಯ್ಯ ಗುತ್ತೇದಾರ್ (99016 99918) ಅವರನ್ನು ಸಂಪರ್ಕಿಸಬಹುದು.