ಜನರ ನಿರೀಕ್ಷೆಗೆ ಸ್ಪಂದಿಸುವ ಪಕ್ಷ ಬಿಜೆಪಿ

IMG-20241110-WA0521
Published on

ಆಲೂರು : ಜನರ ನಿರೀಕ್ಷೆಗೆ ತಕ್ಕಂತೆ ಸುಧಾರಣೆಗಳನ್ನು ಮಾಡಲು ಬಿಜೆಪಿ ಶ್ರಮಿಸುತ್ತಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನದಲ್ಲಿ ಹೆಚ್ಚು ಸದಸ್ಯತ್ವ ಮಾಡಿಸಿದ ಕಾರ್ಯಕರ್ತರನ್ನು ಸನ್ಮಾನಿಸಿ ಅವರು ಮಾತನಾಡಿದರು. ಬಿಜೆಪಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ. ಪ್ರಜಾಸತ್ತಾತ್ಮಕ ಪಕ್ಷವೂ ಹೌದು. ಪಾರದರ್ಶಕತೆ ಮತ್ತು ಪ್ರಾಮಾಣಿಕತೆಯಿಂದ ಸದಸ್ಯತ್ವ ಅಭಿಯಾನ ಮಾಡಿಸುವ ಸಂಘಟನೆಯಾಗಿದೆ. ಜನರ ವಿಶ್ವಾಸಾರ್ಹತೆಯೇ ಪಕ್ಷದ ಜೀವಾಳವಾಗಿದೆ ಎಂದು ಅವರು ಹೇಳಿದರು.

ನಾವು ದೊಡ್ಡ ದೊಡ್ಡ ಕನಸುಗಳನ್ನು ಕಂಡರೂ ಜನರಿಗೆ ನೀಡುವ ಭರವಸೆಗಳನ್ನು ಮೊದಲು ಈಡೇರಿಸುವ ಸಾಮರ್ಥ್ಯದೊಂದಿಗೆ ಹೊಂದಿಕೆಯಾಗಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ನಮ್ಮ ಭರವಸೆಗಳನ್ನು ಕ್ರಿಯೆಗಳಾಗಿ ಪರಿವರ್ತಿಸಲು ಶಕ್ತರಾಗಿರಬೇಕು. ಈ ಕಾರಣಕ್ಕಾಗಿಯೇ ಬಿಜೆಪಿಗೆ ಎಲ್ಲರೂ ಸದಸ್ಯರಾಗಿ ಶಕ್ತಿ ತುಂಬಬೇಕು ಎಂದು ಮಂಜು ಹೇಳಿದರು.

ಗೌರವ ಹೆಚ್ಚಾಗಿದೆ: ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ದೇಶದಲ್ಲಿ ಬಿಜೆಪಿ ಜನಪರವಾಗಿದೆ. ಬಹುತೇಕರು ಇಷ್ಟಪಡುವ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಯೋಗ್ಯ ನೇತೃತ್ವದಿಂದ ಸಂಘಟನೆಯ ಗೌರವ ಹೆಚ್ಚಾಗಿದೆ. ಪಕ್ಷದ ಕಾರ್ಯಕರ್ತರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯನ್ನೂ ಸಂಪರ್ಕಿಸಿ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ವಿಚಾರ ಹಾಗೂ ಸರ್ಕಾರದ ಸೇವಾ ಕಾರ್ಯಗಳನ್ನು ಬಿತ್ತರಿಸಿರುವುದು ಅಭಿನಂದನೀಯ ಎಂದರು.

ಆಲೂರು -ಸಕಲೇಶಪುರ ಕ್ಷೇತ್ರದಲ್ಲಿ 40 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಈ ನಿಟ್ಟಿನಲ್ಲಿ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net