

ಯಾದಗಿರಿ: ಅನೇಕ ರೋಗಗಳಿಗೆ ದಿವ್ಯ ಔಷಧಿಯಾಗಿರುವ `ಎಳನೀರು' ಕಲ್ಯಾಣ ಕರ್ನಾಟಕ ಜನರಿಗೆ ದುಬಾರಿಯಾಗಿದ್ದು, ಕುಡಿಯಲು ಹಿಂದೆ-ಮುAದೆ ನೋಡುವಂತಾಗಿದೆ. ಮರ‍್ನಾಲ್ಕು ತರಹದ ಎಳನೀರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ನಂ.೧ ಕ್ವಾಲಿಟಿ ಒಂದು ಎಳನೀರಿಗೆ ೭೦-೮೦, ಉಳಿದಂತೆ ೫೦-೬೫ ರೂ.ಗೆ ಮಾರಾಟವಾಗುತ್ತಿವೆ.
ಐದಾರು ತಿಂಗಳಿAದ ಕಕದ ಯಾದಗಿರಿ ಸೇರಿ ಏಳು ಜಿಲ್ಲೆಗಳಲ್ಲಿ ಎಳನೀರು ಸರಬರಾಜಿನಲ್ಲಿ ವ್ಯತ್ಯಯ ಮತ್ತು ಅನ್ಯ ರಾಜ್ಯದವರ ಬೇಡಿಕೆ ಹೆಚ್ಚಾಗಿz್ದೆÃ ದರ ಹೆಚ್ಚಳಕ್ಕೆ ಮೂಲ ಕಾರಣ ಎನ್ನಲಾಗುತ್ತಿದೆ.
ಕಕ ಜಿಲ್ಲೆಗಳಿಗೆ ಮಂಡ್ಯ, ಮದ್ದೂರು, ಮೈಸೂರು ಭಾಗದಿಂದ ಹಲವಾರು ವರ್ಷಗಳಿಂದ ಎಳನೀರು ಸರಬರಾಜು ಆಗುತ್ತಿದೆ. ರಾಜ್ಯದ ವಿವಿಧೆಡೆ ಬೆಳೆಯುವ ಎಳನೀರು ಮೈಸೂರು ಭಾಗದಷ್ಟು ಗುಣಮಟ್ಟ ಮತ್ತು ರುಚಿ ಇಲ್ಲದ್ದರಿಂದ ಸ್ಥಳೀಯ ವ್ಯಾಪಾರಿಗಳು ಲಾರಿಗಟ್ಟಲೇ ತರಿಸಿ ಮಾರಾಟ ಮಾಡುತ್ತಾರೆ. ಆದರೀಗ ಪಂಜಾಬ್, ರಾಜಸ್ಥಾನ, ಹರಿಯಾಣ ಸೇರಿ ಉತ್ತರ ಭಾರತದ ವ್ಯಾಪಾರಿಗಳು ಮೈಸೂರು ಭಾಗದ ಜಿಲ್ಲೆಗಳಿಂದ ಕೊಂಡೊಯ್ಯುತ್ತಿರುವುದರಿAದ ಕಕ ಜಿಲ್ಲೆಗಳಿಗೆ ನಿಗದಿತ ಸಮಯ ಮತ್ತು ಹಳೇ ದರದಲ್ಲಿ ಎಳನೀರು ಸಿಗುತ್ತಿಲ್ಲ.
ಬೆಂಗಳೂರು ಇತರ ಜಿಲ್ಲೆಗಳಿಗೆ ನಮ್ಮವರು ಹೋದಾಗ ಎಳನೀರು ಕುಡಿದ ವಿಷಯ ತಮೂರಲ್ಲಿ ಬಂದು ಹೇಳುವಂಥ ಕಾಲವಿತ್ತು. ಅಂದರೆ ಈ ಭಾಗದಲ್ಲಿ ಇವು ಬೆಳೆಯುತ್ತಿರಲಿಲ್ಲ. ಬೆಳದ ಅಲ್ಪಸ್ವಲ್ಪ ಎಳೆನೀರು ಸಹ ಗುಣಮಟ್ಟದ್ದು ಆಗಿರುತ್ತಿರಲಿಲ್ಲ. ಹೀಗಾಗಿ ಕಕ ಜಿಲ್ಲೆಗಳಲ್ಲಿ ಎಳನೀರಿಗೆ ಭಾರಿ ಡಿಮಾಂಡ್ ಇತ್ತು. ಸ್ಥಳೀಯರು ಇಲ್ಲಿತನಕ ಎಳನೀರು ತಂದು ವಹಿವಾಟು ಶುರು ಮಾಡುತ್ತ ಅದರ ವ್ಯಾಪಾರಿಗಳಾದರು.
ಮೊದಲೆಲ್ಲ ೨೫-೩೦ ರೂಪಾಯಿಗೆ ಒಂದು ಎಳನೀರು ಸಿಗುತ್ತಿತ್ತು. ಆಗ ಒಂದು ಲಾರಿ ಲೋಡ್ ಬಂದರೆ ಇಲ್ಲಿನ ವ್ಯಾಪಾರಿಗಳು ೧೦೦-೨೦೦ ಎಳನೀರು ಹೋಲ್‌ಸೇಲ್‌ನಲ್ಲಿ ಖರೀದಿಸಿ ೩೫-೪೦ ರೂಪಾಯಿಗೆ ಒಂದರAತೆ ಮಾರುತ್ತಿದ್ದರು. ಈ ದರ ಕೇಳಿಯೇ ಇದು ಶ್ರೀಮಂತರ ಪಾನಿಯ ಎಂದು ಹೇಳಲಾಗುತ್ತಿತ್ತು. ಯಾವಾಗ ಹೆಚ್ಚೆಚ್ಚು ಎಳನೀರು ಇಲ್ಲಿಗೆ ಸರಬರಾಜು ಆಗಲು ಶುರುವಾಯಿತೋ ಅಲ್ಲಿಂದ ಜನಸಾಮಾನ್ಯರು ಮತ್ತು ವಿಶೇಷವಾಗಿ ರೋಗಿಗಳು ಖರೀದಿಸಿ ಕುಡಿಯಲು ಆರಂಭಿಸಿದರು.
ಒAದರ ಬದಲು ವಾರಕ್ಕೆ ನಾಲ್ಕೆÊದು ಲಾರಿ ಎಳನೀರು ಈ ಭಾಗದ ಜಿಲ್ಲೆಗಳಲ್ಲಿ ಸರಬರಾಜು ಆಗಲು ಶುರುವಾಯಿತು. ಬೇಸಿಗೆಯ ನಾಲ್ಕು ತಿಂಗಳಲ್ಲಿ ವ್ಯಾಪಾರ ಭರ್ಜರಿಯಾಗುತ್ತದೆ. ಇಲ್ಲಿನ ವ್ಯಾಪಾರಿಗಳೇ ಲಾರಿ ಬಾಡಿಗೆ ಪಡೆದು ಅಲ್ಲಿಂದ ಎಳನೀರು ತಂದು ಮಾರುತ್ತ ಲಕ್ಷಾಂತರ ಜನರಿಗೆ ಕುಡಿಯುವಂತೆ ಮಾಡಿದರು. ಈಗದು ಕಕದ ಎಲ್ಲ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಸಿಗುವ ಪಾನಿಯವಾಗಿ ಮಾರ್ಪಟ್ಟಿದೆ.
ಆದರೀಗ ಬೇರೆ ಬೇರೆ ರಾಜ್ಯದ ವ್ಯಾಪಾರಿಗಳು ಕರ್ನಾಟಕಕ್ಕೆ ಖರೀದಿಗಾಗಿ ಲಗ್ಗೆ ಇಡುತ್ತಿರುವುದರಿಂದ ಸಕಾಲಕ್ಕೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಸರಬರಾಜಿನಲ್ಲಿ ತೊಂದರೆಯಾಗಿದೆ. ಇನ್ನು ಒಂದು ಎಳನೀರು ೭೦-೮೦ ರೂ. ದರ ಇದ್ದುದರಿಂದ ವ್ಯಾಪಾರ ಕಡಿಮೆ ಆಗಿದೆ.