

ಗುರುಮಠಕಲ್: ಕಲುಷಿತ ನೀರು ಸೇವನೆಯಿಂದಾಗಿ ಜನ ಅಸ್ವಸ್ಥರಾಗುತ್ತಿರುವುದು ತಾಲೂಕಿನಲ್ಲಿ ಪದೇಪದೆ ನಡೆದಿರುವುದು ಆತಂಕ ಮೂಡಿಸಿದೆ.
ಕಾಕಲವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಕಲವಾರ ಸೇರಿ ಕೆಲ ಹಳ್ಳಿಗಳಲ್ಲಿ ವಾಂತಿಭೇದಿಯಿAದ 16 ಜನ ಅಸ್ವಸ್ಥಗೊಂಡು ಗುರುಮಠಕಲ್ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಿತಿ ಗಂಭೀರವಿದ್ದ ಒಬ್ಬನನ್ನು ಯಾದಗಿರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಒಡೆದಿರುವ ಕುಡಿಯುವ ನೀರಿನ ಪೈಪ್‌ನಲ್ಲಿ ಕಲುಷಿತ ನೀರು ಸೇರಿz್ದೆÃ ವಾಂತಿಭೇದಿಗೆ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾಜರಕೋಟ ಪ್ರಾದೇಶಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಚಪೆಟ್ಲಾ ಉಪ ಕೇಂದ್ರದ ಏಳು ನೀರಿನ ಮಾದರಿಗಳಲ್ಲಿ ಆರು ಹಾಗೂ ಕಾಕಲವಾರದ ಮೂರು ನೀರಿನ ಮೂಲಗಳು ಕುಡಿಯಲು ಯೋಗ್ಯ ಇಲ್ಲ ಎಂಬ ಮಾಹಿತಿ ಗ್ರಾಪಂನವರಿಗೆ ಇದ್ದರೂ ಅಗತ್ಯ ಕ್ರಮ ಕೈಗೊಂಡಿಲ್ಲ. ಗುರುಮಠಕಲ್ ಆರೋಗ್ಯ ಕೇಂದ್ರದ ಆಂಬುಲೆನ್ಸ್ ದುರಸ್ತಿಯಲ್ಲಿದ್ದು, ಕಾಕಲವಾರದ ವೃದ್ಧನೊಬ್ಬನ ಸ್ಥಿತಿ ವಾಂತಿಭೇದಿಯಿAದ ಗಂಭೀರವಾಗಿದ್ದಾಗ ಕೆಲಕಾಲ ಆತಂಕ ಮೂಡಿತ್ತು. ನಂತರ ಆಟೋದಲ್ಲಿ ಗುರುಮಠಕಲ್‌ಗೆ ಕಳಿಸಲಾಯಿತು.
ಸ್ಥಳಕ್ಕೆ ಜಿಪಂ ಸಿಇಒ ಗರೀಮಾ ಪನ್ವಾರ್, ಡಿಎಚ್‌ಒ ಪ್ರಭುಲಿಂಗ ಕೆ.ಮಾನಕರ, ಪಿಐ ಸಂಜೀವಕುಮಾರ ಕುಂಬಾರಗೇರ ಭೇಟಿ ನೀಡಿ ಪರಿಶೀಲಿಸಿದರು.