

ಮುಳಬಾಗಿಲು: ಸಹಕಾರಿ ವ್ಯವಸ್ಥೆಯಲ್ಲಿ ಅತಿಯಾದ ರಾಜಕೀಯ ಪ್ರವೇಶದಿಂದ ಎಲ್ಲ ಕೆಲಸ ಕಾರ್ಯಗಳಿಗೂ ಅಡ್ಡಿ ಆತಂಕಗಳೇ ಹೆಚ್ಚಾಗುತ್ತಿವೆ. ಆದರೂ ರೈತರು, ಮಹಿಳೆಯರಿಗೆ ಸುಲಭವಾಗಿ ಸಾಲ ನೀಡಲು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ ಮುಂಚೂಣಿಯಲ್ಲಿರುತ್ತದೆ ಎಂದು ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ತಾಲೂಕಿನ ಹನುಮನಹಳ್ಳಿ ವಿಎಸ್‌ಎಸ್‌ಎನ್ ಮೂಲಕ ಡಿಸಿಸಿ ಬ್ಯಾಂಕ್‌ನಿಂದ 2.20 ಕೋಟಿ ರೂಗಳನ್ನು 44 ಮಹಿಳಾ ಸ್ವಸಹಾಯ ಸಂಘಗಳ 442 ಸದಸ್ಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ವಿತರಿಸಿ ವಾತನಾಡಿ, ಎಷ್ಟೇ ಟೀಕೆ ಟಿಪ್ಪಣೆ ವಾಡಿ ಅಡ್ಡಿ ಪಡಿಸಿದರೂ ಮಹಿಳೆಯರಿಗೆ ಸಾಲ ನೀಡುವುದರಲ್ಲಿ ಹಿಂದುಳಿಯುವುದಿಲ್ಲ. ಇದರಲ್ಲಿ ಪಕ್ಷ ರಾಜಕಾರಣ ಬರುವುದಿಲ್ಲ. ನಾವ್ಯಾರೂ ಶಾಸಕರಾಗಲು ಸಾಲ ನೀಡುತ್ತಿಲ್ಲ. ಮೀಸಲು ಕ್ಷೇತ್ರವಾಗಿದ್ದು ಜನರ ಕಷ್ಟಗಳಿಗೆ ಸ್ಪಂದಿಸಲು ವಿಎಸ್‌ಎಸ್‌ಎನ್ ಮೂಲಕ ಸಾಲ ನೀಡುತ್ತಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್ ಮುಚ್ಚುವ ಹಂತ ತಲುಪಿದಾಗ ಅದನ್ನು ಪುನಶ್ಚೇತನಗೊಳಿಸಲು ಹಲವಾರು ಸಹಕಾರಿಗಳ ಸಲಹೆ ಸೂಚನೆ ಪಡೆದು ಸರ್ಕಾರದಿಂದ ಆರ್ಥಿಕ ಅನುಧಾನ ಪಡೆದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ 400 ಮಹಿಳಾ ಸ್ವಸಹಾಯ ಸಂಗಳ ಸದಸ್ಯರಿಗೆ ಶೂನ್ಯ ಬಡ್ಡಿಯಲ್ಲಿ ಸಾಲ ನೀಡಲಾಗುತ್ತಿದೆ. ಸಾಲದ ಬಡ್ಡಿಯನ್ನು ಸರ್ಕಾರ ತುಂಬಿಕೊಡುತ್ತಿದೆ. ಜಾತಿರಹಿತ, ಪಕ್ಷ ರಹಿತವಾಗಿ ಸಾಲ ವಿತರಣೆ ವಾಡಲಾಗುತ್ತಿದೆ. ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳ ಮೂಲಕ ನೀಡುತ್ತಿದ್ದು ಅದನ್ನು ಸಕಾಲದಲ್ಲಿ ಮರು ಪಾವತಿ ವಾಡಬೇಕು ಎಂದರು.
ವಿಎಸ್‌ಎಸ್‌ಎನ್‌ಗಳಲ್ಲೂ ಆನ್‌ಲೈನ್ ಬ್ಯಾಂಕಿಂಗ್ ವಾಡಿದ್ದು, ಪ್ರತಿಯೊಬ್ಬರೂ ಇಲ್ಲಿಯೇ ಉಳಿತಾಯ ಠೇವಣಿ ವಾಡಿ ವ್ಯವಹಾರ ವಾಡಿದರೆ ನಿಮಗೆ ಬೇಕಾದಾಗ ಸುಲಭವಾಗಿ ಸಾಲ ಪಡೆಯಬಹುದು ಎಂದು ಕಿವಿವಾತು ಹೇಳಿದರು.
ತಾಪಂ ವಾಜಿ ಅಧ್ಯಕ್ಷ ವಿ.ರುಪತಿರೆಡ್ಡಿ, ವಿಎಸ್‌ಎಸ್‌ಎನ್ ಅಧ್ಯಕ್ಷ ಎಂ.ನಂಜುಂಡಪ್ಪ, ಗ್ರಾಪಂ ವಾಜಿ ಉಪಾಧ್ಯಕ್ಷ ವಿ.ಸುಬ್ರಮಣಿ, ಮುಖಂಡರಾದ ಬೆಟ್ಟಗೇರಹಳ್ಳಿ ಆರ್.ಸೀನಪ್ಪ, ಹನುಮನಹಳ್ಳಿ ವಿಠಲ್‌ರಾವ್, ಕೆ.ತಿಪ್ಪಯ್ಯಶೆಟ್ಟಿ, ಕಿಟ್ಟಪ್ಪ, ವಾರಪ್ಪ, ಚನ್ನೇಗೌಡ, ಶಂಕರಪ್ಪ, ನಲ್ಲೂರು ಎಂ.ಪೋತಲಪ್ಪ, ನಂಜುಂಡಪ್ಪ, ಆರ್.ಬಂಗಾರಮ್ಮ, ಸುಬ್ರಮಣಿ, ಮೇಲೇರಿ ನಾಗರಾಜ್, ವಿ.ಎಸ್.ಎಸ್.ಎನ್. ಕಾರ್ಯದರ್ಶಿ ಚೌಡಪ್ಪ ಇದ್ದರು.
ಹನುಮನಹಳ್ಳಿ ವಿಎಸ್‌ಎಸ್‌ಎನ್‌ಗೆ ಅಪೆಕ್ಸ್ ಬ್ಯಾಂಕ್‌ನಿಂದ 2 ಲಕ್ಷ ರೂ. ಅನುದಾನವನ್ನು ಕಟ್ಟಡ ಅಭಿವೃದ್ಧಿಗೆ ನೀಡಿದ್ದು, ಅದನ್ನು 2 ವರ್ಷವಾದರೂ ಉಪಯೋಗಿಸಿಕೊಂಡಿಲ್ಲ. ಈಗ ವಾಪಸ್ ಪಡೆದಿದ್ದು ಸಂಕ್ಕೆ ಲ್ಯಾಪ್‌ಟಾಪ್ ಕೊಡುಗೆ ನೀಡಲಾಗುತ್ತದೆ. ಮುಂದೆ ಕಟ್ಟಡ ಕಟ್ಟಲು ಅನುದಾನ ನೀಡಲಾಗುವುದು. ಎಂ.ಸಿ.ನೀಲಕಂಠೇಗೌಡ, ಅಪೆಕ್ಸ್ ಬ್ಯಾಂಕ್ ನಿರ್ದೇಶಕ