ಜನರ ಅನುಕೂಲಕ್ಕಾಗಿ ಶಾಂತಿ ವಾಹನ ಕೊಡುಗೆ

17blrp1
ಬೇಲೂರು ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾನಿ ಸೋಮಣ್ಣ ಅವರು ಶಾಂತಿ ವಾಹನವನ್ನು ಹಸ್ತಾಂತರಿಸಿದರು. ತುಳಸಿದಾಸ್, ಡಾ.ಮಮತಾ, ನಿಂಗರಾಜು, ಧರ್ಮರಾಜು, ಲಿಂಗರಾಜು, ಸುರೇಶ್ ಇತರರು ಇದ್ದರು.
Published on

ಬೇಲೂರು: ಜನರ ಅನುಕೂಲಕ್ಕಾಗಿ ತಂದೆ, ತಾಯಿ ಹೆಸರಲ್ಲಿ ಅರೇಹಳ್ಳಿ ಸೋಮಣ್ಣ ಅವರು ಸರ್ಕಾರಿ ಆಸ್ಪತ್ರೆಗೆ ಶಾಂತಿ ವಾಹನ ಕೊಡುಗೆಯಾಗಿ ನೀಡಿರುವುದು ಇತರರಿಗೆ ಮಾದರಿಯಾಗಿದೆ ಎಂದು ಕಾಂಗ್ರೆಸ್ ಕಿಸಾನ್ ಖೇತ್ ರಾಜ್ಯ ಸಂಚಾಲಕ ತುಳಸಿ ದಾಸ್ ಹೇಳಿದರು.


ತಾಲೂಕಿನ ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬುಧವಾರ ಅರೇಹಳ್ಳಿಯ ದಾನಿ ಸೋಮಣ್ಣ ಅವರು ಕೊಡುಗೆಯಾಗಿ ನೀಡಿರುವ ಶಾಂತಿ ವಾಹನ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿ, ಮಲೆನಾಡು ಭಾಗದಲ್ಲಿ ಬಡವರು, ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ. ಒಂದೊಂದು ರೂಪಾಯಿಗೂ ಕಷ್ಟ ಪಡುವ ನೊಂದ ಕುಟುಂಬದವರು ಸಾವು ನೋವು ಸಂಭವಿಸಿದ ಸಂದರ್ಭ ಹೆಚ್ಚು ಹಣ ಕೊಟ್ಟು ಇತರ ವಾಹನವನ್ನು ಪಡೆದು ಆಸ್ಪತ್ರೆ ಅಥವಾ ಇನ್ನಿತರ ಕಡೆಗೆ ತೆರಳಬೇಕಿತ್ತು. ಇದನ್ನು ಅರಿತ ಅರೇಹಳ್ಳಿಯ ದಾನಿ ಸೋಮಣ್ಣ ಸಾರ್ವಜನಿಕರು ಉಚಿತವಾಗಿ ಬಳಸಿ ಕೊಳ್ಳಲು ಅನುಕೂಲವಾಗಲಿ ಎಂದು ಸರ್ಕಾರಿ ಆಸ್ಪತ್ರೆಗೆ ಶಾಂತಿ ವಾಹನವನ್ನು ಕೊಡುಗೆಯಾಗಿ ನೀಡಿರುವುದು ಶ್ಲಾಘನೀಯ ಎಂದರು.


ಅರೇಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಮತಾ ಮಾತನಾಡಿ, ಶವ ಸಾಗಿಸಲು ಬಡವರು ತುಂಬ ಕಷ್ಟ ಪಡುತ್ತಾರೆ. ಬಡವರ ಕಷ್ಟವನ್ನು ಅರಿತು ಸರ್ಕಾರಿ ಆಸ್ಪತ್ರೆಗೆ ಶಾಂತಿ ವಾಹನ ಕೊಡುಗೆಯಾಗಿ ನೀಡುತ್ತಿರುವ ಸೋಮಣ್ಣ ಅವರ ಕಾರ್ಯವನ್ನು ಶ್ಲಾಘಿಸಿದರು. ಎಲ್ಲರಲ್ಲೂ ಸಂಪತ್ತಿದ್ದರೂ ಕೊಡುವ ಮನಸ್ಥಿತಿ ಇರಬೇಕು ಎಂದು ತಿಳಿಸಿದರು.


ಡಿಎಸ್‌ಎಸ್ ಜಿಲ್ಲಾ ಸಂಚಾಲಕ ನಿಂಗರಾಜು, ದಲಿತ ಮುಖಂಡ ಧರ್ಮರಾಜು, ಪಿಎಸ್‌ಐ ಲಿಂಗರಾಜು, ಗ್ರಾಪಂ ಸದಸ್ಯ ಸುರೇಶ್, ತುಳಸಿದಾಸ್ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net