ಜನಮಾನಸದಲ್ಲಿ ನೆಲೆಸಿದ ಚಂದ್ರಶೇಖರ ಪಾಟೀಲ್

28 hbd 01
Published on

ಹುಮನಾಬಾದ್: ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರಕ್ಕಾಗಿ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ದಿಟ್ಟ ಕ್ರಮ ಹಾಗೂ ಈ ಭಾಗದ ಸ್ವಾತಂತ್ರ ಹೋರಾಟಗಾರರ ತ್ಯಾಗ ಬಲಿದಾನ ನಮ್ಮ ಮಕ್ಕಳು ಅರಿಯಬೇಕು ಎಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಬಸವರಾಜ ಆರ್ಯ ಹೇಳಿದರು.

ಪಟ್ಟಣದ ವಿಶ್ವಭಾರತಿ ಪ್ರೌಢ ಶಾಲೆಯಲ್ಲಿ ರೋಟರಿ ಕ್ಲಬ್ ಹುಮನಾಬಾದ್ ಎಲೈಟ್ ಘಟಕದಿಂದ ಬುಧವಾರ ಹಮ್ಮಿಕೊಂಡ ಸ್ವಾತಂತ್ರ ಹೋರಾಟಗಾರ ದಿ.ಚಂದ್ರಶೇಖರ ಪಾಟೀಲರ ಜೀವನ ಚರಿತ್ರೆ ಕುರಿತ ಕಿರು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಇಡೀ ದೇಶ ಸ್ವಾತಂತ್ರದ ಸಂಭ್ರಮದಲ್ಲಿದ್ದರೆ ನಮ್ಮ ದೇಶ ನಿಜಾಮನ ಕರಾಳ ಆಡಳಿತದಲ್ಲಿ ಇತ್ತು. ಒಂದು ವರ್ಷದ ನಂತರ ಸ್ವಾತಂತ್ರÈ ದೊರೆತ ಹೋರಾಟದ ಇತಿಹಾಸವನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.

ಚಿಕ್ಕ ವಯಸ್ಸಿನಲ್ಲಿಯೇ ಮಹಾಗಾಂವದ ಚಂದ್ರಶೇಖರ ಪಾಟೀಲ್, ಶಿವಚಂದ್ರಜೀ, ಬಸವರಾಜ ಹುಡಗಿ, ರಾಮಚಂದ್ರ ವೀರಪ್ಪ ಆರ್ಯ ಸೇರಿ ಹಲವಾರು ಸ್ವಾತಂತ್ರ ಸೇನಾನಿಗಳು ಹೈದರಾಬಾದ್ ಕರ್ನಾಟಕದ ಸ್ವಾತಂತ್ರÈ ಹೋರಾಟಕ್ಕೆ ಶ್ರಮಿಸಿದ್ದರು. ಇದನ್ನು ನಮ್ಮ ಮಕ್ಕಳಿಗೆ ತಿಳಿಸಬೇಕು ಎಂದರು.
ನಾಗರಾಜ ಕರ್ಪೂರ ಅವರು ಚಂದ್ರಶೇಖರ ಪಾಟೀಲರ ಜೀವನ ಸಾಧನೆ ಕುರಿತು ಕಿರು ಹೊತ್ತಿಗೆ ಪ್ರಕಟಿಸಿ ರೋಟರಿ ಕ್ಲಬï ಮೂಲಕ ಮಕ್ಕಳಿಗೆ ವಿತರಿಸಿದರು.

ರೋಟರಿ ಸ್ಥಳೀಯ ಅಧ್ಯಕ್ಷ ನಾಗರಾಜ ಕರ್ಪೂರ ಪ್ರಾಸ್ತಾವಿಕ ಮಾತನಾಡಿದರು. ಸಂಸ್ಥೆ ಅಧ್ಯಕ್ಷ ರಾಜಕುಮಾರ ಭೂರೇಶ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಅಭಿಷೇಕ ಚಿದ್ರಿ, ಶರತಕುಮಾರ ನಾರಾಯಣಪೇಟ್ಕರ್, ಪ್ರಕಾಶ ತಟಪಟಿ, ಪ್ರಶಾಂತ ಸಾಗರ, ಜೀವನರಡ್ಡಿ, ಬೆಂಜಮೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net