ಜನಮನ ಸೂರೆಗೊಂಡ ಸಲೀಂ ಅಲಿ ನಾಟಕ

2 ckm 3 (1)
ಚಿಕ್ಕಮಗಳೂರಲ್ಲಿ ಆಯೋಜಿಸಿದ್ದ ಸಲೀಂ ಅಲಿ ಪಕ್ಷಿ ಲೋಕದ ಬೆರಗು ನಾಟಕವನ್ನು ಪ್ರತಿಷ್ಠಾನದ ಸದಸ್ಯರು ಹಾಗೂ ಲೇಖಕ ಡಾ. ಪ್ರದೀಪ್ ಕೆಂಜಿಗೆ ಉದ್ಘಾಟಿಸಿದರು. ಡಾ.ಸಿ.ರಮೇಶ್, ಎಚ್.ಎಂ.ಓಂಕಾರಪ್ಪ ಇದ್ದರು.
Published on

ಚಿಕ್ಕಮಗಳೂರು: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಚಿಕ್ಕಮಗಳೂರಿನ ಜಿಲ್ಲಾ ವಿಜ್ಞಾನ ಕೇಂದ್ರ, ರಾಜ್ಯ ವಿಜ್ಞಾನ ಪರಿಷತ್ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಸಲೀಂ ಅಲಿ ಪಕ್ಷಿ ಲೋಕದ ಬೆರಗು ನಾಟಕ ಜನಮನ ಸೂರೆಗೊಂಡಿತು.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಹಾಗೂ ಲೇಖಕ ಡಾ.ಪ್ರದೀಪ್ ಕೆಂಜಿಗೆ ಮಾತನಾಡಿ, ಪಕ್ಷಿತಜ್ಞ ಡಾ.ಸಲೀಂ ಅಲಿ ಅವರ ಜೀವನಾಧಾರಿತವಾದ ಈ ನಾಟಕ ಸಲೀಂ ಅಲಿ ಅವರ ಬದುಕಿನ ವಿವರಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಗೌರವಾಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಪಕ್ಷಿ ತಜ್ಞರಾಗಿ ಪಕ್ಷಿ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಸಲೀಂ ಅಲಿ ಅವರು ತಮ್ಮ ಬದುಕನ್ನು ಪಕ್ಷಿಗಳ ಅಧ್ಯಯನ ಹಾಗೂ ಉಳಿವಿಗಾಗಿ ಮೀಸಲಿಟ್ಟಿದ್ದರು. ಅವರ ಬದುಕು ಮತ್ತು ಬರಹ ಯುವಪೀಳಿಗೆಯನ್ನು ತಲುಪಬೇಕಿದೆ ಎಂದರು.
ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ ಮಾತನಾಡಿ, ಪಕ್ಷಿಲೋಕದ ಕೌತುಕಗಳನ್ನು ಪರಿಚಯಿಸಿದ ಪಕ್ಷಿಲೋಕದ ಬಗೆಗೊಂದು ಬೆರಗು ಮೂಡುವಂತೆ ಮಾಡಿದ ಸಲೀಂ ಅಲಿ ಅವರ ಬದುಕನ್ನು ರಂಗ ಮಾಧ್ಯಮದ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಈ ನಾಟಕ ಯಶಸ್ವಿಯಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಡಾ.ಸಿ.ರಮೇಶ್, ಜಿಲ್ಲಾ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಚ್.ಎಂ.ಓಂಕಾರಪ್ಪ, ಕೆ.ಜಿ.ನೀಲಕಂಠಪ್ಪ, ತ್ಯಾಗರಾಜ್, ಖಜಾಂಚಿ ಸದಾಶಿವ ಮೂರ್ತಿ, ಸಹ ಕಾರ್ಯದರ್ಶಿಗಳಾದ ಪ್ರಕಾಶ್, ಪ್ರಶಾಂತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net