ಜನಮನ ಸೂರೆಗೊಂಡ ಎಸ್‌ಡಿಎಂ ಕಲಾವೈಭವ

11111111
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಲಾವೈಭವ ತಂಡದಿAದ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ಇಲ್ಲಿನ ಜೆ.ಎಸ್.ಎಸ್. ಸಭಾಂಗಣದಲ್ಲಿ ಜರುಗಿದ ಕಲಾವೈಭವ ತಂಡದ ಸುಮಾರು ೧೦೦ಕ್ಕೂ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸತತ ೨ ಗಂಟೆಗಳ ರಾಮಾಯಣ, ಮಹಾಭಾರತದ ಆಯ್ದ ಭಾಗಗಳ ನೃತ್ಯ ಪ್ರಸ್ತುತಪಡಿಸಿದರು. ೧೦೦ ವಿದ್ಯಾರ್ಥಿಗಳ ಸಮೂಹ ನೃತ್ಯದಲ್ಲಿ ಭರತನಾಟ್ಯ, ಮೋಹಿನಿ ಅಟ್ಟಂ, ಯಕ್ಷಗಾನ, ದಾಂಡಿಯ, ನರಸಿಂಹಾವತಾರ, ಶಿವತಾಂಡವ, ಪ್ಲೆಮಿಂಕೋ, ಕಥಕ್ ನೃತ್ಯಗಳು ಹಾಗೂ ರೂಪಕಗಳು ಎಲ್ಲರ ಮನಸೂರೆಗೊಂಡವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net