ಜನಬೆಂಬಲಕ್ಕೆ ಹೆದರಿದ ಬಿಜೆಪಿ ನಾಯಕರು

7 RMN-MGD P 1
Published on

ಮಾಗಡಿ: ಮೇಕೆದಾಟು ಯೋಜನೆ ರೂಪಿಸಿದವರು ಕಾಂಗ್ರೆಸ್‌ನವರು, ಯೋಜನೆ ಬಗ್ಗೆ ಜನ ಬೆಂಬಲ ಕಂಡು ಹೆದರಿರುವ ಬಿಜೆಪಿ ನಾಯಕರು ಹೋರಾಟ ಹತ್ತಿಕ್ಕಲು ಕರೊನಾ ಕಾರಣ ಮುಂದಿಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ನಿಯಮ ಪಾಲಿಸಿ ನೀರಿಗಾಗಿ ನಡೆಯುತ್ತೇವೆ

ರಾಷ್ಟ್ರ್ರದ ನೀರಿನ ಹಂಚಿಕೆಯಲ್ಲಿ ಕುಡಿಯುವ ನೀರಿನ ಬಗ್ಗೆ ಯಾವುದೇ ವಿವಾದಗಳಿಲ್ಲ. ಮೇಕೆದಾಟು ನಮ್ಮ ರಾಜ್ಯದಲ್ಲಿದ್ದು ಸಮುದ್ರಕ್ಕೆ ಹರಿಯುವ ನೀರನ್ನು ಬೆಂಗಳೂರು ಸೇರಿ ಸುತ್ತಮುತ್ತಲ 7 ಜಿಲ್ಲೆಗಳ ಜನರಿಗೆ ಕುಡಿಯುವ ನೀರು ನೀಡಲು ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಅವಧಿಯಲ್ಲಿ ಮಂಜೂರಾತಿ ನೀಡಿ, ಡಿಪಿಆರ್ ವಾಡಿ ಕೇಂದ್ರಕ್ಕೆ ಕಳುಹಿಸಲಾಯಿತು. ಈ ಬಗ್ಗೆ ಕೇಂದ್ರ ಸರ್ಕಾರ ಡಿಪಿಆರ್‌ನಲ್ಲಿ ನೂನ್ಯತೆ ಸರಿಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದಾಗ ಅಂದು ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುವಾರ್ ಅವರು ಮುತುವರ್ಜಿ ವಹಿಸಿ ನೂನ್ಯತೆ ಸರಿಪಡಿಸಿ ವಾಪಸ್ ಕೇಂದ್ರಕ್ಕೆ ಕಳಿಸಲಾಯಿತು ಎಂದರು.

ಮೇಕೆದಾಟು ಜಲಾಶಯ ಬಳಿ 4,700 ಎಕರೆ ಅರಣ್ಯ ಭೂಮಿಗೆ ಬದಲಾಗಿ ಚಾಮರಾಜನಗರ, ಮಳವಳ್ಳಿಯಲ್ಲಿ 10 ಸಾವಿರ ಎಕರೆ ಜಮೀನು ಹಸ್ತಾಂತರಿಸಲಾಗಿದೆ. ಮೇಕೆದಾಟು ಯೋಜನೆಗೆ 9500 ಕೋಟಿ ರೂ.ಖರ್ಚಾಗಲಿದ್ದು, ವಿದ್ಯುತ್ ಉತ್ಪಾದನೆ ಹಾಗೂ 66 ಟಿಎಂಸಿ ನೀರು ಸಂಗ್ರಹವಾಗಲಿದೆ ಎಂದರು.

ಮೇಕೆದಾಟು ಮೂಲಕ ತಮಿಳುನಾಡಿಗೆ ಹೋಗುವ ನೀರನ್ನು ನಿಲ್ಲಿಸುವುದಿಲ್ಲ. ರಾಜ್ಯದ ಕಬಿನಿ, ಹಾರಂಗಿ, ಕೆಆರ್‌ಎಸ್, ಹೇವಾವತಿ ಜಲಾಶಯದ ನೀರುಗಳನ್ನು ಜಲಾನಯನ ಪ್ರದೇಶಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ರೇವಣ್ಣ ವಿವರಿಸಿದರು.

ವೈಯಕ್ತಿಕ ಟೀಕೆ ಸರಿಯಲ್ಲ

ಸರ್ಕಾರದ ಕಾರ್ಯಕ್ರಮದಲ್ಲಿ ಯಾರ ಬಗ್ಗೆಯೂ ವಾತನಾಡುವುದು ಸಚಿವರಾದವರಿಗೆ ಶೋಭೆ ತರುವುದಿಲ್ಲ. ಉಪಮುಖ್ಯಮಂತ್ರಿ ಆಗಿದ್ದವರು ತಾಕತ್ತು ಇದ್ದರೆ ಬರಲಿ, ಗಂಡಸಾಗಿದ್ದರೆ ಬರಲಿ ಎಂದರೆ ಸುಮ್ಮನಿರಲು ಸಾಧ್ಯವಿಲ್ಲ. ಅವರು ಬಳಸಿರುವ ಭಾಷೆ ಸರಿಯಲ್ಲ. ಇಂತಹ ಘಟನೆಗಳು ನಡೆಯಬಾರದು. ಅವರು ಮಾಗಡಿ ತಾಲೂಕಿನಲ್ಲಿ ಹುಟ್ಟಿದ್ದರೆ, ನಾವೂ ಕೂಡ ಇಲ್ಲಿಯೇ ಹುಟ್ಟಿದವರಲ್ಲವೇ ಎಂದು ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತಿಗೆ ರೇವಣ್ಣ ತಿರುಗೇಟು ನೀಡಿದರು.

ಸಂಸದ ಡಿ.ಕೆ.ಸುರೇಶ್, ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ಕುವಾಳೂರು ಗಂಗಾಧರ್, ರ್, ಚಿಗಗಾಣಕಲ್ ನಟರಾಜು, ತಾಪಂ ವಾಜಿ ಸದಸ್ಯರಾದ ನಾರಾಯಣ್, ಎಪಿಎಂಸಿ ಜಿಲ್ಲಾಧ್ಯಕ್ಷ ಸಿಎಂ.ಮಾರೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net