ಜನಪ್ರಿಯತೆ ಸಹಿಸದೆ ವಿರೋಧಿಗಳಿಂದ ಸುಳ್ಳು ಸುದ್ದಿ

CTD 30 HD PURA (1)---05
Published on

ಚಿತ್ರದುರ್ಗ:ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂಬ ಅಪಪ್ರಚಾರಕ್ಕೆ ಕಿವಿಕೊಡದಂತೆ ಮಾಜಿ ಸಚಿವ ಎಚ್.ಆಂಜ ನೇಯ ಜನರಿಗೆ ಮನವಿ ಮಾಡಿದರು. ಹೊಳಲ್ಕೆರೆ ತಾಲೂಕು ಎಚ್‌ಡಿ ಪುರ ಗ್ರಾಪಂನಲ್ಲಿ ಬುಧವಾರ ಆಯೋಜಿಸಿದ್ದ ಗೃಹಲಕ್ಷ್ಮಿ ಯೋಜನೆ ನೇರ ಪ್ರಸಾರ ವೀಕ್ಷಣೆ,ಉದ್ಘಾಟನೆ ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೂ ಐದು ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿರುತ್ತವೆ.
ಯೋಜನೆಗಳ ಜನಪ್ರಿಯತೆ ಸಹಿಸಲಾರದೆ ವಿರೋಧಿಗಳು ಸುಳ್ಳು ಹರಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಶಕ್ತಿ,ಅನ್ನಭಾಗ್ಯಗಳು ಯೋಜನೆಯ ಲಾಭ ರಾಜ್ಯದ ಜನರಿಗೆ ದೊರಕಿದೆ. ಗ್ಯಾರಂಟಿಗಳನ್ನು ಜಾರಿಗೊಳಿಸಿದ ಏಕೈಕ ರಾಜ್ಯ ಕರ್ನಾಟಕ,ಏಕೈಕ ಪಕ್ಷ ಕಾಂಗ್ರೆಸ್ ಸರ್ಕಾರ.ಯುವನಿಧಿ ಯೋಜನೆ ಕೂಡ ಶೀಘ್ರ ಜಾರಿಯಾಗಲಿದೆ. ಅಡುಗೆ ಅನಿಲ ದರ ಇಳಿಕೆ ಗ್ಯಾರಂಟಿಗಳ ಎಫೆಕ್ಟ್ ಎಂದು ಕೇಂದ್ರದ ನಡೆಯನ್ನು ಟೀಕಿಸಿದರು.
ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ.ಹನುಮಂತಪ್ಪ,ಎಚ್.ಡಿ.ಪುರ ಗ್ರಾಪಂ ಅಧ್ಯಕ್ಷ ದಿವಾಕರ್,ಉಪಾಧ್ಯಕ್ಷೆ ಗೀತಾ,ಚಿತ್ರಹಳ್ಳಿ ಗ್ರಾಪಂ ಉಪಾಧ್ಯಕ್ಷೆ ಭಾಗ್ಯಮ್ಮ,ಎನ್.ಜೆ.ಹಳ್ಳಿ ಗ್ರಾಪಂ ಅಧ್ಯಕ್ಷ ವೀರನಾಗಪ್ಪ,ಉಪಾಧ್ಯಕ್ಷೆ ಗೀತಾಂಜಲಿ,ಮುಖಂಡರಾದ ಎಚ್.ಡಿ.ರಂಗಯ್ಯ,ಕೆ.ಸಿ.ರಮೇಶ್, ಕಾಟಲಿಂಗಪ್ಪ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net