ಜನಪ್ರಿಯ ಆಸ್ಪತ್ರೆಯ ವತಿಯಿಂದ ಸ್ವಚ್ಛತಾ ಆಂದೋಲನ

ಜನಪ್ರಿಯ ಆಸ್ಪತ್ರೆಯ ವತಿಯಿಂದ ಸ್ವಚ್ಛತಾ ಆಂದೋಲನ
Published on

ಹಾಸನ : ಗಾಂಧಿ ಜಯಂತಿ ಪ್ರಯುಕ್ತ ದೇಶಾದ್ಯಂತ ಸ್ವಚ್ಛ ಭಾರತ ಆಂದೋಲನದ ಸ್ವಚ್ಛತೆಯೇ ದೈವತ್ವ ಎಂಬ ಘೋಷವಾಕ್ಯದೊಂದಿಗೆ ಜನಪ್ರಿಯ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಹಲವೆಡೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಂತರ ಮಾತನಾಡಿದ ಜನಪ್ರಿಯ ಫೌಂಡೇಶನ್ ಮುಖ್ಯಸ್ಥ ಡಾ.ವಿ.ಕೆ ಅಬ್ದುಲ್ ಬಷೀರ್ ಅವರು ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜನ್ಮದಿನದ ಸ್ಮರಣಾರ್ಥ ಸ್ವಚ್ಛ ಭಾರತ ದಿನವನ್ನಾಗಿ ಆಚರಿಸಲಾಗುತ್ತಿದೆ. ಜನರು ಸ್ವಚ್ಛತೆ ಕಾಪಾಡಿಕೊಂಡು ರೋಗರುಜಿನಗಳಿಂದ ದೂರವಿರಬೇಕು, ನಗರ ಸೌಂದರ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕು ಎಂದು ಹೇಳಿದರು.

ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಹೆಮ್ಮಿಗೆ ಮೋಹನ್ ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕ ಪಠ್ಯದ ಜೊತೆ ಸ್ವಚ್ಛತಾ ಅರಿವು ಮೂಡಿಸುತ್ತಿರುವ ಜನಪ್ರಿಯ ಫೌಂಡೇಶನ್‌ನ ಮುಖ್ಯಸ್ಥರಾದ ಡಾ.ವಿ.ಕೆ ಅಬ್ದುಲ್ ಬಷೀರ್ ರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸಿದರು. ಈ ಸ್ವಚ್ಛ ಭಾರತ ಆಂದೋಲನವನ್ನು ಪ್ರತಿಯೊಂದು ಹಳ್ಳಿ, ನಗರ, ಹಾಗೂ ಪಟ್ಟಣಗಳನ್ನು ಸ್ವಚ್ಛವಾಗಿಸಲು ರೂಪಿಸಲಾಗಿದೆ . ಈ ಅಭಿಯಾನವು ಗಾಂಧೀಜಿಯವರ ಕನಸಾಗಿತ್ತು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ನಮ್ಮಲ್ಲರ ಜವಾಬ್ದಾರಿ ಎಂದರು.

ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ.ವೆಂಕಟೇಶ್ ಮೂರ್ತಿ, ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶಬೀರ್‌ಆಹಮದ್, ಖಜಾಂಚಿ ಹೆಚ್.ಡಿ. ಜಯೇಂದ್ರ ಕುಮಾರ್, ನಿದೇಶಕ ಎಸ್.ಎಸ್ ಪಾಷ, ನಗರಸಭೆ ಸದಸ್ಯ ಸಂತೋಷ ಕುಮಾರ್, ವೈದ್ಯರಾದ ಡಾ. ಎಂ ಅನುಪ್, ಡಾ. ರಜತ್, ಕಾಲೇಜಿನ ಆಡಳಿತಾಧಿಕಾರಿ ಡಾ. ದಯಾನಂದ ಸೇರಿದಂತೆ ವಿದ್ಯಾರ್ಥಿಗಳು, ವೈದ್ಯರು, ಸಿಬ್ಬಂದಿ ವರ್ಗದವರು ಮತ್ತು ಸಾರ್ವಜನಿಕರ ಪಾಲ್ಗೋಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net