ಜನಪರ ನಾಯಕರಾಗಿದ್ದ ಮುದ್ನಾಳ್

ydg5
ಯಾದಗಿರಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ, ಮಹೇಶ ರಡ್ಡಿ ಮುದ್ನಾಳ್, ಲಲಿತಾ ಅನಪುರ, ಹಣಮಂತ ಇಟಗಿ, ರಾಚಣ್ಣಗೌಡ ಮುದ್ನಾಳ್, ಡಾ.ಶರಣಭೂಪಾಲರಡ್ಡಿ, ದೇವಿಂದ್ರನಾಥ ನಾದ, ಗುರು ಕಾಮಾ, ಸಿದ್ದಣ್ಣಗೌಡ ಕಾಡಂನೂರ ಇತರರಿದ್ದರು.
Published on

ಯಾದಗಿರಿ: ನಗರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿರ್ಮಾಣ ಸೇರಿ ಅನೇಕ ಅಭಿವೃದ್ಧಿ ಕೆಲಸಗಳು ತಮ್ಮ ಶಾಸಕತ್ವದ ಅವಧಿಯಲ್ಲಿ ಮಾಡುವ ಮೂಲಕ ಮಾಜಿ ಶಾಸಕ ದಿ.ವೆಂಕಟರಡ್ಡಿ ಮುದ್ನಾಳ್ ಜನಪರ ನಾಯಕರಾಗಿದ್ದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರಡ್ಡಿ ಯಾಳಗಿ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ನೇರ ನಡೆ ನಿಷ್ಠುರವಾದಿಯಾಗಿದ್ದ ಅವರು, ಮೃದು ಸ್ವಭಾವ ಕೂಡ ಹೊಂದಿದ್ದರು ಎಂದು ಬಣ್ಣಿಸಿದರು.

ತಮ್ಮ ಶಾಸಕತ್ವದ ಅವಧಿಯಲ್ಲಿ ಯಾರೊಬ್ಬರಿಗೂ ತೊಂದರೆ ಕೊಡದೆ, ಸರಳತೆಯಿಂದ ಜನರ ಸಮಸ್ಯೆ ಬಗೆಹರಿಸುತ್ತಿದ್ದರು. ಅವರ ಅಗಲಿಕೆ ಪಕ್ಷಕ್ಕೆ ಮತ್ತು ಕುಟುಂಬಕ್ಕೂ ಸಾಕಷ್ಟು ಹಾನಿಯಾಗಿದೆ ಎಂದು ವಿಷಾಧಿಸಿದರು.

ಪP್ಷÀದ ಹಿರಿಯ ಮುಖಂಡ ಸಿದ್ದಣ್ಣ ಗೌಡ ಕಾಡಂನೂರ ಮಾತನಾಡಿ, ವೆಂಕಟರಡ್ಡಿ ಅವರನ್ನು ಕಳೆದುಕೊಂಡ ಜಿ¯್ಲೆ ಬಡವಾಗಿದೆ. ಅವರ ಆಡಳಿತಾವಧಿ ಸುವರ್ಣಯುಗವಾಗಿತ್ತು. ಕಷ್ಟ ಎಂದು ಯಾರೇ ಅವರ ಬಳಿ ಬಂದರೂ ಸ್ಪಂದಿಸುತ್ತಿದ್ದರು ಎಂದು ಸ್ಮರಿಸಿದರು.
ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ್ ಮಾತನಾಡಿ, ನಮ್ಮ ಪP್ಷÀದ ಕಾರ್ಯಕರ್ತರು ಮತ್ತು ಮುದ್ನಾಳ್ ಅಭಿಮಾನಿಗಳು ಯಾವುದೇ ಕಾರಣಕ್ಕೂ ದೃತಿಗೆಡಬೇಡಿ. ನಮ್ಮ ತಂದೆ ವೆಂಕಟರಡ್ಡಿ ಮತ್ತು ದೊಡ್ಡಪ್ಪ ಡಾ.ವೀರಬಸವಂತರಡ್ಡಿ ಅವರು ಶಾಸಕರಾಗಿz್ದÁಗ ಸಾಕಷ್ಟು ಅಭಿವೃದ್ಧಿ ಕೆಲಸಗಳು ಮಾಡಿz್ದÁರೆ. ಮುದ್ನಾಳ್ ಮನೆತನ ಸದಾ ನಿಮ್ಮ ಬೆನ್ನಿಗೆ ಇರಲಿದೆ ಎಂದು ತಿಳಿಸಿದರು.

ಬಿಜೆಪಿ ಕಾರ್ಯದರ್ಶಿ ಲಲಿತಾ ಅನಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮಾ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೊನ್ನದ್, ಖಜಾಂಚಿ ತಿರುಪತಿ ಪದರಡ್ಡಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ, ರಾಚಣ್ಣಾಗೌಡ ಮುದ್ನಾಳ್, ಡಾ.ಶರಣಭೂಪಾಲರಡ್ಡಿ, ದೇವಿಂದ್ರನಾಥ ನಾದ, ಮಲ್ಲಣ್ಣಗೌಡ ಹತ್ತಿಕುಣಿ, ಖಂಡಪ್ಪ ದಾಸನ, ಮೆಲಪ್ಪ ಗುಳಗಿ, ಪರುಶುರಾಮ ಕುರಕುಂದಿ, ಬಸವರಾಜ ವಿಭೂತಹಳ್ಳಿ,ಅಡಿವೆಪ್ಪ ಜಾಕಾ, ಮಾರುತಿ ಕುಲಾಲï, ಸದಾಶಿವರಡ್ಡಿ ರೊಟ್ನಡಗಿ, ವೆಂಕಟರಡ್ಡಿ ಅಬ್ಬೆತುಮಕೂರು, ಬಸವರಾಜ ಪಾಟೀಲ್ ಬಿಳಾರ, ಲಿಂಗಪ್ಪ ಹತ್ತಿಮನಿ, ರಮೇಶ ದೊಡಮನಿ, ಮಲ್ಲಿಕಾರ್ಜುನ ಕಟ್ಟಿಮನಿ, ವೀಣಾ ಮೋದಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net