ಜನಪರ ಕೆಲಸಕ್ಕಿರಲಿ ಆದ್ಯತೆ

31 smg 2
Published on

ಶಿವಮೊಗ್ಗ: ನಿರಂತರ ಚಟುವಟಿಕೆಗಳ ಮೂಲಕ ಮಾತ್ರ ಸಂಸ್ಥೆಗಳ ಜೀವಂತಿಕೆ ಸಾಧ್ಯ. ಆದ್ದರಿಂದ ಜನಪರ ಕಾರ್ಯಕ್ರಮಗಳೇ ಸಂಘ, ಸಂಸ್ಥೆಗಳ ಆಶಯವಾಗಬೇಕು. ಹೀಗಾದರೆ ಮಾತ್ರ ಸಂಸ್ಥೆಗಳು ಸಮಾಜದಲ್ಲಿ ಜನಪ್ರಿಯವಾಗಿ ಗುರುತಿಸಿಕೊಳ್ಳುತ್ತವೆ ಎಂದು ಶಾಸಕ ಡಿ.ಕೆ.ಶಿವಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘ ಹೊರತಂದಿರುವ 2020ನೇ ಸಾಲಿನ ದಿನದರ್ಶಿಕೆಯನ್ನು ಬೆಂಗಳೂರಲ್ಲಿ ಸೋಮವಾರ ಬಿಡುಗಡೆಗೊಳಿಸಿ ಮಾತನಾಡಿದರು. ಉತ್ತಮ ಸಮಾಜ ನಿರ್ವಣದಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯ. ಬಹುಪಾಲು ಜನ ಸಂಪೂರ್ಣ ಸ್ವಾರ್ಥವನ್ನೇ ಬಯಸುವ ಕಾಲದಲ್ಲಿ ಸಮಾಜದ ಒಳಿತಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುವ ಸಂಘಟನೆಗಳ ಅಗತ್ಯ ಇಂದಿನ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಮೋಹನ್ ಅಧ್ಯಕ್ಷತೆಯ ಸಂಘವು ಸಕ್ರಿಯವಾವಾಗಿ ಮತ್ತು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬದಲಾವಣೆ ಜಗದ ನಿಯಮ. ಕಾಲಚಕ್ರ ತಿರುಗಿದಂತೆ ದಿನಗಳು ಸಹ ಬದಲಾಗುತ್ತವೆ. ದಿನ ಬದಲಾವಣೆಯನ್ನು ದಿನದರ್ಶಿಕೆಯಲ್ಲಿ ಪ್ರತಿನಿತ್ಯ ಕಾಣುತ್ತೇವೆ. ದಿನದರ್ಶಿಕೆ ಬದುಕಿನ ಅವಿಭಾಜ್ಯ ಅಂಗ, ಅದೊಂದು ಜ್ಞಾನವಾಹಿನಿಯೂ ಆಗಿದೆ ಎಂದರು. ಶಿವಮೊಗ್ಗ ಜಿಲ್ಲಾ ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಆರ್.ಮೋಹನ್ ಮುಂತಾದವರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net