ಜನಪದದ ಸಂಸ್ಕಾರ ಪ್ರಸ್ತುತ ಅಗತ್ಯ

sri kasapa
ಶೃಂಗೇರಿಯಲ್ಲಿ ಕಸಾಪ ಸಂಸ್ಥಾಪನಾ ದಿನಾಚರಣೆಯಲ್ಲಿ ಸಾಹಿತಿ ಆಗುಂಬೆ ಗಣೇಶ್ ಹೆಗಡೆ ಅವರ ಗರ್ವದ ಗಮ್ಮತ್ತು ಕಾದಂಬರಿಯನ್ನು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಂ.ಮಲ್ಲೇಶ್ ಗೌಡ ಬಿಡುಗಡೆಗೊಳಿಸಿದರು. ರಮೇಶ್ ಶೂನ್ಯ, ಆನಂದಸ್ವಾಮಿ,ಪುಷ್ಪಾ, ಶೈಲಜಾ, ಸುಮಂಗಲಿ ಇತರರಿದ್ದರು.
Published on

ಶೃಂಗೇರಿ: ಸಂಸ್ಕಾರವನ್ನು ನಮಗೆ ನೀಡುವಳು ತಾಯಿ ಮಾತ್ರ. ಜನಪದ ಜಗತ್ತಿನಲ್ಲಿ ಸಂಪ್ರದಾಯ ಹಾಗೂ ಸಂಸ್ಕಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಅಲ್ಲಿ ಭಾವನಾತ್ಮಕ ಸಂಬಂಧ ಮಿಳಿತವಾಗಿದ್ದು ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇತ್ತು ಎಂದು ಹಾಸನ ಜಿಲ್ಲಾ ಕಸಾಪ ಅಧ್ಯಕ್ಷ ಎಚ್.ಎಂ.ಮಲ್ಲೇಶ್ ಗೌಡ ತಿಳಿಸಿದರು.

ಸೋಮವಾರ ತಾಲೂಕು ಕಸಾಪ ಆಯೋಜಿಸಿದ್ದ ಕಸಾಪ 101ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಸಾಹಿತಿ ಆಗುಂಬೆ ಗಣೇಶ್ ಹೆಗಡೆ ಅವರ ‘ಗರ್ವದ ಗಮ್ಮತ್ತು’ ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ನಾಗರಿಕತೆ ಹಾಗೂ ಶಿಕ್ಷಣದ ಹೆಸರಿನಲ್ಲಿ ಮಕ್ಕಳಿಗೆ ಸಿಗಬೇಕಾದ ಮೂಲ ಸಂಸ್ಕಾರ ಸಿಗದೆ ಮಕ್ಕಳು ಏಕಾಂತವಾಗಿ ಬೆಳೆಯುವ ಸ್ಥಿತಿ ಎದುರಾಗಿದೆ ಎಂದರು.

ಮಗುವಿನ ಲಾಲನೆ-ಪಾಲನೆ ಮಾಡುವ ತಾಯ್ತನದ ಅನುಭವ ಮರೆಯಾಗಿದೆ. ಪ್ರಾಕತಿಕವಾಗಿ ಮಕ್ಕಳನ್ನು ಹಡೆಯುವ ಸಹಜವಾದ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಿದೆ. ಮಗುವನ್ನು ಸಹಜವಾಗಿ ಬೆಳೆಯಲು ನಾವು ಬಿಡುತ್ತಿಲ್ಲ. ಹೊಸ್ತಿಲು ದಾಟುತ್ತ ಪ್ರಕತಿ ಹಾಗೂ ಸಮಾಜದ ಜತೆ ಮಗುವನ್ನು ಬೆಳೆಸುವ ಕಾಳಜಿ ಪಾಲಕರು ತೋರಿಸುತ್ತಿಲ್ಲ. ತಾಯಿಹಾಲು ಕುಡಿಯುವ ಬದಲು ಮಾರುಕಟ್ಟೆಯ ಹಾಲನ್ನು ನೀಡಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ಮಗುವಿಗೆ ತಾಯಿಯ ಮಡಿಲು ಮೊದಲ ಪ್ರಪಂಚ. ಆದರೆ ಅಂಥ ಸುಖದಿಂದ ಮಗು ವಂಚಿತವಾಗುತ್ತಿದೆ. ಪಾಲಕರು ಮಕ್ಕಳಿಗೆ ಶಿಕ್ಷಣದ ಜತೆ ಸಮಾಜಮುಖಿಯಾಗಿ ಬೆಳೆಯಲು ಅವಕಾಶ ನೀಡಬೇಕಿದೆ. ಮಗು ಊಟ ಮಾಡುವಾಗ ಮೊಬೈಲ್ ನೀಡುವುದು ಅಪಾಯಕಾರಿ ಬೆಳವಣಿಗೆ ಎಂದರು.

ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಎಚ್.ಎಸ್.ವೆಂಕಟೇಶ್ ಮಾತನಾಡಿ, ಸಾಹಿತ್ಯಕ್ಕೆ ಸಂಸ್ಕಾರ ನೀಡುವ ಶಕ್ತಿಯಿದೆ. ಸಾಹಿತ್ಯದ ಅಧ್ಯಯನದಿಂದ ಬದುಕು ಸಮದ್ಧವಾಗುತ್ತದೆ. ಸಂಸ್ಕೃತಿ, ಸಂಸ್ಕಾರದ ಬೆಳವಣಿಗೆಗಾಗಿ, ನಾಡು ನುಡಿಯ ಸರ್ವತೋಮುಖ ಅಭಿವದ್ಧಿಗಾಗಿ ನಾಲ್ವಡಿ ಕಷ್ಣದೇವರಾಯ ಅವರು ನೀಡಿದ ಕೊಡುಗೆ ಅನನ್ಯ. ಅವರಿಂದ ಸ್ಥಾಪಿತಗೊಂಡ ಕಸಾಪ ಪ್ರಸ್ತುತ ಹೆಮ್ಮರವಾಗಿ ಬೆಳೆದಿದೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದಿಂದ ಹಿಡಿದು ಗ್ರಾಮ ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮದ್ಧಿಗಾಗಿ ಹಾಗೂ ಎಲೆಮರೆಕಾಯಿಯಂತಿದ್ದ ಸಾಹಿತಿಗಳನ್ನು ಮುನ್ನೆಲೆಗೆ ತಂದ ಕೀರ್ತಿ ಕಸಾಪಕ್ಕೆ ಸಲ್ಲುತ್ತದೆ ಎಂದು ಹೇಳಿದರು.

ಸಮಾಜದ ಅಸಮಾನತೆ ದೂರಮಾಡುವ ಅದ್ಭುತ ಶಕ್ತಿ ಸಾಹಿತ್ಯಕ್ಕೆ ಇದೆ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಮೊಬೈಲ್ ನಮಗೆ ಪ್ರಾಮುಖ್ಯವಾಗಿದೆ. ಮೊಬೈಲ್ ನಮಗೆ ಮಾಹಿತಿ ನೀಡಬಹುದು. ಆದರೆ ನಮ್ಮೊಳಗಿನ ಪ್ರಜ್ಞಾನಕ್ಕೆ ಪುಸ್ತಕಗಳ ಓದು ಮುಖ್ಯ. ನಕಾರಾತ್ಮಕ ಚಿಂತನೆ ಹೊರದೂಡಿ ಸಕಾರಾತ್ಮಕ ವಿವೇಚನೆ ಬೆಳೆಸುವ ಸಾಹಿತ್ಯದ ಅಧ್ಯಯನ ಪ್ರಸ್ತುತ ಅತಿ ಅಗತ್ಯವಾಗಿದೆ ಎಂದು ಹೇಳಿದರು.

ಗರ್ವದ ಗಮ್ಮತ್ತು ಕತಿಯ ಕುರಿತು ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಗುರುಮೂರ್ತಿ ಮಾತನಾಡಿದರು. ತಾಲೂಕು ಕಸಾಪ ಅಭಿವದ್ಧಿಗೆ ಶ್ರಮಿಸಿದ ದಂದೂರು ರಾಜಣ್ಣ, ಶಿವರಾಮಯ್ಯ, ವಸಂತಿ ರಾಮಣ್ಣ ಹಾಗೂ ರೇಖಾಚಿತ್ರಕಾರ ಸತ್ಯನಾರಾಯಣ ಆಚಾರ್ಯ, ಪ್ರೇರಿತ್ ಅವರನ್ನು ಸನ್ಮಾನಿಸಲಾಯಿತು.

ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಹಿಳಾ ಘಟಕದ ಅಧ್ಯಕ್ಷೆ ಸುಮಂಗಲಿ ಆನಂದಸ್ವಾಮಿ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಅಂಗುರ್ಡಿ ದಿನೇಶ್, ಜಿಲ್ಲಾ ಕಸಾಪ ಸಂಚಾಲಕ ಪುಷ್ಪ್ಪಾಲಕ್ಷ್ತ್ರೀನಾರಾಯಣ್, ಸಾಹಿತಿ ಆಗುಂಬೆ ಗಣೇಶ್ ಹೆಗಡೆ, ತಾಲೂಕು ಕಸಾಪ ಪೂರ್ವಾಧ್ಯಕ್ಷೆ ಶೈಲಜಾ ರತ್ನಾಕರ ಹೆಗಡೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net