`ಜನಪದ' ಸಾಹಿತ್ಯದ ತಾಯಿ ಬೇರು

ydg4
ಯಾದಗಿರಿಯಲ್ಲಿ ಬುಧವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪತ್ರಕರ್ತ ಎಸ್.ಎಸ್.ಮಠ, ಪ್ರಕಾಶ ಅಂಗಡಿ ಅವರನ್ನು ಸನ್ಮಾನಿಸಲಾಯಿತು. ಗೊ.ರು.ಚನ್ನಬಸಪ್ಪ, ಡಾ.ಸೋಮಶೇಖರ, ಅಪ್ಪಾರಾವ ಅಕ್ಕೋಣಿ, ಸಿದ್ದಪ್ಪ ಹೊಟ್ಟಿ ಇತರರಿದ್ದರು.
Published on

ಯಾದಗಿರಿ: ಕನ್ನಡ ಸಾಹಿತ್ಯದಲ್ಲಿ ಜನಪದ ಸಾಹಿತ್ಯ ಅತ್ಯಂತ ಪುರಾತನವಾಗಿದ್ದು, ಜನಪದ ಸಾಹಿತ್ಯದ ತಾಯಿ ಬೇರು ಆಗಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಹಾಗೂ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.

ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ಜಿ¯್ಲÁ ಶರಣ ಸಾಹಿತ್ಯ ಪರಿಷತ್ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಮೈಸೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಕೆ.ಆರ್.ಲಿಂಗಪ್ಪ ಜಾನಪದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಅP್ಷÀರ e್ಞÁನವಿಲ್ಲದಿದ್ದರೂ ತಮ್ಮ ಸೃಜನಶೀಲ ಸೃಷ್ಟಿಯಿಂದ ಅತ್ಯುನ್ನತವಾದ ಸಾಹಿತ್ಯ ಕಟ್ಟಿದವರು ನಮ್ಮ ಜನಪದರು. ಜನಪದದಲ್ಲಿ ಬದುಕಿನ ಅವಿನಾಭಾವ ಸಂಬಂಧವಿದೆ. ನಮ್ಮ ದೇಶಿಯರ ಜನಜೀವನದ ರಸಾನುಭೂತಿಯನ್ನು ಉಳಿಸಿಕೊಂಡು ಬಂದ ಶ್ರೀಮಂತಿಕೆ ಈ ಜನಪದ ಸಾಹಿತ್ಯಕ್ಕಿದೆ ಎಂದು ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯP್ಷÀ ಡಾ.ಸಿ.ಸೋಮಶೇಖರ ಕಾರ್ಯಕ್ರಮದ ಅಧ್ಯP್ಷÀತೆ ವಹಿಸಿ ಮಾತನಾಡಿ, ಜನಪದವು ಕಾಲದಿಂದ ಕಾಲಕ್ಕೆ, ಒಬ್ಬರಿಂದ ಒಬ್ಬರಿಗೆ ಸಾಗಿ ಬಂದು ನಮ್ಮೆಲ್ಲರ ಜೀವನದಲ್ಲಿ ಹಾಸು ಹೊಕ್ಕಾಗಿದೆ ಎಂದರು.

ಜನಪದವು ನಮ್ಮ ನೋವು, ನಲಿವು, ಸುಖ, ದುಃಖ, ಪ್ರೇಮ ವಾತ್ಸಲ್ಯ, ಕರುಣೆ, ಕೃತಜ್ಞತೆ ಹೀಗೆ ಎಲ್ಲ ಭಾವವನ್ನು ವ್ಯಕ್ತಪಡಿಸುವ ಅನುಭವ ಹಾಗೂ ಜೀವನದ ಸೂಕ್ಷ್ಮ ಸಂಗತಿಗಳ ಅನುಭಾವವನ್ನು ಹೊಂದಿದೆ. ಜನಪದ ಸಾಹಿತ್ಯವನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಅವುಗಳ ಮೌಲ್ಯ ತಿಳಿಸಿಕೊಡುವ ಕಾರ್ಯ ಶರಣ ಸಾಹಿತ್ಯ ಪರಿಷತ್ ಮಾಡುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಿರಿಯ ಉಪಾಧ್ಯP್ಷÀ ಅಪ್ಪಾರಾವ ಅಕ್ಕೋಣಿ ಮಾತನಾಡಿ, ಯಾದಗಿರಿಯ ಶರಣ ಸಾಹಿತ್ಯ ಪರಿಷತ್ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಗಡಿ ಜಿ¯್ಲÉಯಲ್ಲಿ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜಿಸಿರುವ ಡಾ.ಸಿದ್ದಪ್ಪ ಹೊಟ್ಟಿ ಅವರ ಕಾರ್ಯ ಶ್ಲಾಘನೀಯ ಎಂದರು.

ಜಾನಪದ ಸಾಹಿತಿಗಳಾದ ಡಾ.ಬಸವರಾಜ ನೆಲ್ಲಿಸರ ಅವರು, ಕೆ.ಆರ್.ಲಿಂಗಪ್ಪ ಅವರ ಜೀವನ ಮತ್ತು ನಡೆದು ಬಂದ ದಾರಿ ಕುರಿತು ಮಾತನಾಡಿದರು. ಡಾ.ಎಲï.ಪಂಚಾP್ಷÀರಿ, ಕದಳಿ ವೇದಿಕೆ ಅಧ್ಯP್ಷÀ ರೇಣುಕಾ ಹಾಗೂ ಜನಪದ ಪ್ರಶಸ್ತಿ ಪುರಷ್ಕøತರಾದ ಇಮಾಂಬಿ ದೊಡ್ಡಮನಿ ಮತ್ತು ಜನಪದ ಗಾಯಕ ವಿಜಯಕುಮಾರ ಸೋನಾರೆ, ಹಿರಿಯ ಸಾಹಿತಿಗಳಾದ ಅಯ್ಯಣ್ಣ ಹುಂಡೇಕರ್, ಡಾ.ಸುಭಾಶಚಂದ್ರ ಕೌಲಗಿ, ಮಹದೇವಪ್ಪ ಅಬ್ಬೆತುಮಕೂರು, ಬಸವಂತ್ರಾಯಗೌಡ ಮಾಲಿ ಪಾಟೀಲï, ಸೋಮಶೇಖರ ಮಣ್ಣೂರು, ವೀರಭದ್ರ ಜಾಕಾಮಠ, ಸೋಮಶೇಖರ ಗಾಂಜಿ, ನಾಗರತ್ನ ಮೂರ್ತಿ ಅನಪೂರ, ಭಾಗ್ಯವಂತಿ ಕೆಂಭಾವಿ, ಪ್ರಕಾಶ ಅಂಗಡಿ ಇತರರಿದ್ದರು.

ಉಪನ್ಯಾಸಕ ಎಸ್.ಎಸ್.ನಾಯಕ್ ಸ್ವಾಗತಿಸಿದರು. ಉಪನ್ಯಾಸಕ ಡಾ.ಭೀಮರಾಯ ಲಿಂಗೇರಿ ನಿರೂಪಿಸಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net