ಜನಪದ ಸಂಭ್ರಮ ಕಾರ್ಯಕ್ರಮ

ಜನಪದ ಸಂಭ್ರಮ ಕಾರ್ಯಕ್ರಮ
Published on


ಅರಕಲಗೂಡು: ಸಾಂಸ್ಕೃತಿಕ ಶ್ರೀಮಂತಿಕೆಯೊಂದಿಗೆ ಸಂಘದ ಬದುಕನ್ನು ಕಟ್ಟಿಕೊಟ್ಟ ಸುಂದರ ಜಾನಪದ ಜಗತ್ತನ್ನು ಕಾಲಸ್ಯ ಮಾಡಿರುವುದು ವಿಷಾದನೀಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿ?ತ್ ಜಿಲ್ಲಾಧ್ಯಕ್ಷ ಡಾ. ಎಚ್. ಎಲ್. ಮಲ್ಲೇಶಗೌಡ ಬೇಸರ ವ್ಯಕ್ತಪಡಿಸಿದರು.


ಪಟ್ಟಣದ ಹೆಂಟಗೆರೆಯಲ್ಲಿ ತಾಲೂಕು ಕಸಾಪ ಘಟಕ ಆಯೋಜಿಸಿದ್ದ ’ಜನಪದ ಸಂಭ್ರಮ’ ಸಾಧಕರಿಗೆ ಸನ್ಮಾನ, ನಾಟಕ, ಜನಪದ ನೃತ್ಯ ಹಾಗೂ ಜಾನಪದ ಹಾಗೂ ಕನ್ನಡ ಗೀತೆಗಳ ಸಂಗೀತಾ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ಸಮುದಾಯ ಸೇರಿಕೊಂಡು ಪೂರ್ವಿಕರು ಆಡುತ್ತಿದ್ದ ಆಟಗಳು ಅದ್ಭುತವಾಗಿತ್ತು. ಆಧುನಿಕತೆ ಭರಾಟೆಯಲ್ಲಿ ಇಂತಹ ಆಟಗಳನ್ನು ಮರೆಯುತ್ತಿರುವುದು ಸರಿಯಲ್ಲ ಎಂದರು.


ಹಾಸಿಗೆ ಇದ್ದ?್ಟು ಕಾಲು ಚಾಚು ಎಂದು ಪೂರ್ವಿಕರು ಹೇಳಿದ್ದರು. ಇದು ಪ್ರಪಂಚಕ್ಕೆ ಹೇಳಬಹುದಾದ ಆರ್ಥಿಕ ನೀತಿ. ಅನೇಕ ಮೌಲ್ಯದ ಬದುಕನ್ನು ಪೂರ್ವಿಕರು ಕಟ್ಟಿಕೊಟ್ಟು ಹೋಗಿದ್ದರು. ಅವುಗಳನ್ನು ಗಾಳಿಗೆ ತೂರಲಾಗಿದೆ, ಅವರು ಹೇಳಿಕೊಟ್ಟ ಬುದ್ದಿ ಮಾತುಗಳನ್ನು ನಾಶಪಡಿಸಾಲಾಗುತ್ತಿದೆ ಎನ್ನುವುದು ದುಖಃದ ಸಂಗತಿ ಎಂದು ಅಸಮಧಾನ ವ್ಯಕ್ತಪಡಿಸಿದರು.


ನಮ್ಮ ಪೂರ್ವಜರು ತಿಕ್ಷಣ ಆಲೋಚನೆಯಿದ್ದ ಮೇದಾವಿಗಳು. ಇದು ನಮ್ಮಂತ ವಿದ್ಯಾವಂತರಿಂದಲೂ ಸಾಧ್ಯವಾಗುವುದಿಲ್ಲ. ನಾವು ಪಿಎಚ್‌ಡಿ ಮಾಡಿರಬಹುದು. ಅ ಮೇಧಾವಿಗಳ ಮುಂದೆ ಸೂರ್ಯನ ಎದುರಿನ ದೀಪಗಳಿದ್ದಂತೆ ಎಂದರು.
ಏಕತಾರಿ ಸಾಂಸ್ಕೃತಿಕ ಸಂಘಟನೆ ಕಲಾವಿದರು ದೂರದ ಬೆಟ್ಟ ನುಣ್ಗೆ ಎಂಬ ಗಾದೆಗಳಿಂದ ಕೂಡಿಸಿದ ಜನಪದ ನಾಟಕ ಪ್ರದರ್ಶಿಸಿ ಗಮನ ಸೆಳೆದರು. ಹೆಂಟಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಆ ಮಕ್ಕಳು ಜನಪದ ನೃತ್ಯ ಪ್ರದರ್ಶಿಸಿದರು. ಖ್ಯಾತ ಗಾಯಕರಿಂದ ಜಾನಪದ ಹಾಗೂ ಕನ್ನಡ ಗೀತೆಗಳ ಗಾಯನ ನಡೆಯಿತು.


ಜನಪದ ವಿದ್ವಾಂಸ ಡಾ. ಅಪ್ಪಗೆರೆ ತಿಮ್ಮರಾಜು, ಏಕತಾರಿ ಸಾಂಸ್ಕೃತಿಕ ಸಂಘಟನೆಯ ದೇವಾನಂದ ವರಪ್ರಸಾದ್, ಕಸಾಪ ತಾಲೂಕು ಅಧ್ಯಕ್ಷ ಅನಿಲ್ ಗೌಡ, ಗೌರವ ಕಾರ್ಯದರ್ಶಿಗಳಾದ ಶಿವಕುಮಾರ್, ಗುರುಪ್ರಸಾದ್, ಕೋಶಧ್ಯಕ್ಷ ಪುನೀತ್ ಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net